Sunday, April 28, 2024
Homeಕ್ರೀಡೆಮುರಿದು ಬಿತ್ತು ಕ್ರಿಕೆಟಿಗ ಶಿಖರ್ ಧವನ್ ದಾಂಪತ್ಯ ಜೀವನ: ಪತ್ನಿ ಆಯೇಷಾಗೆ ವಿಚ್ಛೇದನ..!

ಮುರಿದು ಬಿತ್ತು ಕ್ರಿಕೆಟಿಗ ಶಿಖರ್ ಧವನ್ ದಾಂಪತ್ಯ ಜೀವನ: ಪತ್ನಿ ಆಯೇಷಾಗೆ ವಿಚ್ಛೇದನ..!

spot_img
- Advertisement -
- Advertisement -

ನವದೆಹಲಿ: ಟೀಮ್ ಇಂಡಿಯಾ ಎಡಗೈ ಆರಂಭಿಕ ಶಿಖರ್ ಧವನ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ. ಪತ್ನಿ ಅಯೇಷಾ ಮುಖರ್ಜಿಗೆ ಶಿಖರ್ ಧವನ್ ವಿಚ್ಛೇದನ ನೀಡಿದ್ದಾರೆ ಎಂದು ವರದಿಯಾಗಿದೆ. 2ನೇ ಬಾರಿ ವಿಚ್ಛೇದಿತೆಯಾಗಿರುವ ಕುರಿತು ಆಯೇಷಾ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಶಿಖರ್ ಧವನ್ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ ಆಯೇಷಾ ಮುಖರ್ಜಿಯನ್ನು ಪ್ರೀತಿಸಿ ಮದುವೆಯಾಗಿದ್ದರು. 2012 ರಲ್ಲಿ ತನಗಿಂತ 10 ವರ್ಷ ಹಿರಿಯಳೊಂದಿಗೆ ಹೊಸ ಜೀವನ ಆರಂಭಿಸಿದ್ದ ಧವನ್​ಗೆ ಜೋರಾವರ್ ಎಂಬ ಮಗನಿದ್ದಾನೆ. ಧವನ್‌ಗೆ ಮುನ್ನ ಆಸೀಸ್ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದ ಆಯೇಷಾ, ಆ ದಾಂಪತ್ಯದಿಂದ ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದರು. ಕಳೆದ ಒಂಬತ್ತು ವರ್ಷಗಳ ದಾಂಪತ್ಯ ಜೀವನವು ಸುಗಮವಾಗಿ ಸಾಗಿತ್ತು. ಆದರೆ ಕಳೆದೊಂದು ವರ್ಷದಿಂದ ಈ ಜೋಡಿ ನಡುವೆ ವೈಮನಸ್ಸು ಮೂಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದರ ಬೆನ್ನಲ್ಲೇ ಆಯೇಷಾ ತನ್ನ ಇನ್ಸ್ಟಾಗ್ರಾಮ್ ಖಾತೆಯಿಂದ ಶಿಖರ್ ಫೋಟೋಗಳನ್ನು ಡಿಲೀಟ್ ಮಾಡಿದ್ದರು.

ಇದಾಗ್ಯೂ ತಮ್ಮ ಡೈವೊರ್ಸ್​ ಬಗ್ಗೆ ಶಿಖರ್ ಧವನ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಹಾಗೆಯೇ ಆಯೇಷಾ ಅವರ ಹೇಳಿಕೆಯನ್ನೂ ಸಹ ನಿರಾಕರಿಸಿಲ್ಲ. ಹೀಗಾಗಿ ಕಳೆದೊಂದು ವರ್ಷದಿಂದ ದೂರವಾಗಿದ್ದ ಧವನ್ ಜೋಡಿ ಇದೀಗ ಡೈವೋರ್ಸ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇವರ ಮಕ್ಕಳ ಮುಂದಿನ ಜವಾಬ್ದಾರಿ ಏನು ಎನ್ನುವುದು ಇತ್ಯರ್ಥವಾಗಬೇಕಿದೆ. ಹಾಗೆಯೇ ನಿಖರ ವಿಚ್ಛೇದನಕ್ಕೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.

- Advertisement -
spot_img

Latest News

error: Content is protected !!