Sunday, June 7, 2026
Homeಕರಾವಳಿಬಂಟ್ವಾಳ : ಕಲ್ಲಿನ ಕೋರೆಯ ನೀರಿನಲ್ಲಿ ಮುಳುಗಿ ಬಾಲಕ ಸಾವು!

ಬಂಟ್ವಾಳ : ಕಲ್ಲಿನ ಕೋರೆಯ ನೀರಿನಲ್ಲಿ ಮುಳುಗಿ ಬಾಲಕ ಸಾವು!

- Advertisement -
- Advertisement -

ಬಂಟ್ವಾಳ: ಕೆಂಪು ಕಲ್ಲಿನ ಕೋರೆಗೆ ಬಿದ್ದು ಆರನೇ ತರಗತಿ ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಬಂಟ್ವಾಳ ‌ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಬಾರೆಕಾಡು ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.

ಬಾರೆಕಾಡ್ ಕ್ವಾಟ್ರಸ್ ನಿವಾಸಿ ಮುಹಮ್ಮದ್ ಸಾದಿಕ್ ಅವರ ಪುತ್ರ ಮುಹಮ್ಮದ್ ಸೌಹಾದ್ (11) ಮೃತ ಬಾಲಕ.ಆಟ ಆಡುತ್ತಿದ್ದ ಬಾಲಕ ಕಾಲು ಜಾರಿ ನೀರಿಗೆ ಬಿದ್ದ ಕೂಡಲೇ ಉಳಿದ ಮಕ್ಕಳು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದು ನೀರಿನಲ್ಲಿ ಬಿದ್ದಿದ್ದ ಬಾಲಕನನ್ನು ಎತ್ತಿ ಖಾಸಗಿ ಆಸ್ಪತ್ರೆ ಗೆ ದಾಖಲು ಮಾಡಿದ್ದಾರೆ.

ಆದರೆ ಅದಾಗಲೇ ಬಾಲಕ ಮೃತಪಟ್ಟ ಬಗ್ಗೆ ವೈದ್ಯಾಧಿಕಾರಿ ಗಳು ಮಾಹಿತಿ ನೀಡಿದ್ದಾರೆ. ಬಾಲಕನ ಮರಣೋತ್ತರ ಪರೀಕ್ಷೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆ ಯಲ್ಲಿ ನಡೆಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೋಲೀಸ್ ಠಾಣಾ ಎಸ್ ‌ಐ.ಅವಿನಾಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


- Advertisement -

Latest News

error: Content is protected !!