Sunday, June 7, 2026
Homeಕರಾವಳಿಪರೀಕ್ಷೆಯಲ್ಲಿ ಫೇಲ್ ; ಉಜಿರೆ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

ಪರೀಕ್ಷೆಯಲ್ಲಿ ಫೇಲ್ ; ಉಜಿರೆ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

- Advertisement -
- Advertisement -

ಉಜಿರೆ: ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಉಜಿರೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಕೋಲಾರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನೆದಿದೆ.

ಮೃತಳನ್ನು ಅನುಶ್ರೀ ಎಂದು ಗುರುತಿಸಲಾಗಿದೆ. ಎಂಜಿನಿಯರಿಂಗ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಎಂಜಿನಿಯರಿಂಗ್ ಕೊನೆ ಸೆಮಿಸ್ಟರ್ ಪರೀಕ್ಷೆಯಲ್ಲಿ ಮೂರು ಸಬ್ಜಕ್ಟ್ ನಲ್ಲಿ ಫೇಲ್ ಆಗಿದ್ದ ಅನುಶ್ರೀ ತುಂಬಾ ದು:ಖದಲ್ಲಿದ್ದಳು ಎಂದು ಹೇಳಲಾಗಿದೆ.

ಅನುಶ್ರಿಯ ತಂದೆ ಗೋಪಿಕೃಷ್ಣ ಉಪನ್ಯಾಸಕರಾಗಿದ್ದು, ಫೈಲ್ ಆದ ಬಳಿಕ ಧೈರ್ಯ ತುಂಬಿದ್ದರೂ ಕೂಡ ಅನುಶ್ರೀ ಮೌನಕ್ಕೆ ಶರಣಾಗಿದ್ದಳು. ಇಂದು ಮುಂಜಾನೆ ಇಂತಹ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.

- Advertisement -

Latest News

error: Content is protected !!