Tuesday, June 9, 2026
Homeಇತರಉಪ್ಪಿನಂಗಡಿ : ನಿಂತಿದ್ದ ಲಾರಿಗೆ ಪಿಕಪ್ ಢಿಕ್ಕಿ ಪ್ರಕರಣ...! ಚಾಲಕ ಪೊಲೀಸರ ವಶಕ್ಕೆ...!

ಉಪ್ಪಿನಂಗಡಿ : ನಿಂತಿದ್ದ ಲಾರಿಗೆ ಪಿಕಪ್ ಢಿಕ್ಕಿ ಪ್ರಕರಣ…! ಚಾಲಕ ಪೊಲೀಸರ ವಶಕ್ಕೆ…!

- Advertisement -
- Advertisement -

ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಆ.30ರಂದು ಸಂಜೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ತಲೆಮೆರೆಸಿಕೊಂಡಿದ್ದ ಪಿಕಪ್ ಚಾಲಕನನ್ನು ಪುತ್ತೂರು ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಅಹ್ಮದ್ ಜಾವೇದ್ (19) ಬಂಧಿತ ಚಾಲಕ. ಈತನ ವಿರುದ್ಧ ಐಪಿಸಿ ಸೆಕ್ಷನ್ 279, 304(ಎ) ರಂತೆ ಪ್ರಕರಣ ದಾಖಲಾಗಿದೆ.

ಅಪಘಾತ ಸಂಭವಿಸಿದ ತಕ್ಷಣ ಪಿಕಪ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ನಂತರ ಘಟನಾ ಸ್ಥಳದಲ್ಲಿ ದೊರೆತ ದಾಖಲೆಯನ್ನು ಅನುಸರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಸ್ತೆ ಬದಿ ಕೆಟ್ಟು ನಿಂತಿದ ಲಾರಿ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹಳೆ ಮಾರ್ಕೆಟ್ ರಸ್ತೆಯ ನಿವಾಸಿ ಆಸಿಫ್ ಎಂಬವರಿಗೆ ಸೇರಿದಾಗಿದ್ದು, ಅವರು ನೀಡಿದ ದೂರಿನಂತೆ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!