- Advertisement -
- Advertisement -
ಕಡಬ: ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ಪುರಿಯ ನಿವಾಸಿ ಹಾಗೂ ಪರಿವರ್ತನಾ ಸುದ್ದಿ ಪತ್ರಿಕೆಯ ಸಂಪಾದಕರಾಗಿರುವ ಜನಾರ್ದನ ಪುರಿಯ ಅವರು ಶನಿವಾರ ನಿಧನ ಹೊಂದಿದ್ದಾರೆ.
ಕೆಲ ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಜನಾರ್ದನ ಪುರಿಯರವರು ಎರಡು ಬಾರಿ ಆಸ್ಪತ್ರೆ ಗೆ ದಾಖಲಾಗಿದ್ದರು. ಶುಕ್ರವಾರ ರಾತ್ರಿ ಮುಂಬಾಯಿಯ ಅವರ ನಿವಾಸದಲ್ಲಿ ಅಸ್ವಸ್ಥ ಗೊಂಡು ಕೊನೆಯಸಿರುಳೆದಿದ್ದಾರೆ ಎಂದು ತಿಳಿದು ಬಂದಿದೆ. ಇವರು ಪತ್ನಿ ಪ್ರೇಮ, ಪುತ್ರ ಪ್ರತೀಕ್, ಪುತ್ರಿ ಪ್ರಿಯಾಂಕ ಅವರನ್ನು ಅಗಲಿದ್ದಾರೆ.
ಮುಂಬಯಿಯಲ್ಲಿ ಪ್ರಕಟಗೊಳ್ಳುತ್ತಿದ್ದ ಕನ್ನಡದ ಪರಿವರ್ತನಾ ಸುದ್ದಿ ಎಂಬ ಮಾಸ ಪತ್ರಿಕೆಯನ್ನು ಕಡಬದಿಂದಲೂ ಪ್ರಕಟಿಸುತ್ತಿದ್ದರು. ಇವರು ಉತ್ತಮ ಬರಹಗಾರರಾಗಿದ್ದರು. ಜನಾರ್ದನ ಅವರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕಡಬ ಘಟಕದ ಗೌರವಾಧ್ಯಕ್ಷರಾಗಿದ್ದರು.
- Advertisement -