Friday, June 5, 2026
Homeಕರಾವಳಿಪುಂಜಾಲಕಟ್ಟೆ: ಅಪರಿಚಿತ ತಂಡದಿಂದ ಯುವಕನಿಗೆ ಹಲ್ಲೆ; ಮೂವರ ಬಂಧನ!

ಪುಂಜಾಲಕಟ್ಟೆ: ಅಪರಿಚಿತ ತಂಡದಿಂದ ಯುವಕನಿಗೆ ಹಲ್ಲೆ; ಮೂವರ ಬಂಧನ!

- Advertisement -
- Advertisement -

ಬಂಟ್ವಾಳ: ಅಪರಿಚಿತರ ತಂಡವೊಂದು ಯುವಕನಿಗೆ ಅಡ್ಡಕಟ್ಟಿ ಹಲ್ಲೆ ನಡೆಸಿರುವ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಕಿರಣ್ ಕುಮಾರ್ ಎಂದು ಗುರುತಿಸಲಾಗಿದೆ. ಕಿರಣ್ ಕುಮಾರ್ ಅವರು ಕುಕ್ಕಳ ಮನೆಯಿಂದ ಸ್ನೇಹಿತ ನಿತಿನ್ ಎಂಬವರ ಜೊತೆ ಬೈಕಿನಲ್ಲಿ ಹೋಗುತ್ತಿರುವಾಗ ಪುಂಜಾಲಕಟ್ಟೆ ಪೇಟೆಯಲ್ಲಿ ಹತ್ತು ಜನರ ಅಪರಿಚಿತ ತಂಡ ಅಡ್ಡಕಟ್ಟಿ ಬೈಕ್ ನಿಲ್ಲಿಸಿ ಅವ್ಯಾಚ್ಚ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ.



ಹಲ್ಲೆಗೊಳಗಾದ ಕಿರಣ್ ಅವರ ತಲೆಗೆ ಗಾಯಾವಾಗಿದ್ದು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಈ ಬಗ್ಗೆ ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!