Tuesday, June 9, 2026
Homeಇತರಚಿಕ್ಕಮಗಳೂರು: ಡೆತ್​ನೋಟ್ ಬರೆದಿಟ್ಟು ಕರ್ತವ್ಯ ನಿರತ ಕಂದಾಯ ನಿರೀಕ್ಷಕ ಸೋಮಶೇಖರ್ ಆತ್ಮಹತ್ಯೆ...!

ಚಿಕ್ಕಮಗಳೂರು: ಡೆತ್​ನೋಟ್ ಬರೆದಿಟ್ಟು ಕರ್ತವ್ಯ ನಿರತ ಕಂದಾಯ ನಿರೀಕ್ಷಕ ಸೋಮಶೇಖರ್ ಆತ್ಮಹತ್ಯೆ…!

- Advertisement -
- Advertisement -

ಚಿಕ್ಕಮಗಳೂರು: ಡೆತ್ ನೋಟ್ ಬರೆದು ಕಂದಾಯ ನಿರೀಕ್ಷಕ ಸೋಮಶೇಖರ್ (55) ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಸಮೀಪದ ಹಿನ್ನೀರಿನಲ್ಲಿ ನಡೆದಿದೆ.

ಡೆತ್ ನೋಟ್ ನಲ್ಲಿ ಮೂವರ ಹೆಸರು ಬರೆದಿರುವ ಸೋಮಶೇಖರ್ ಬಗರ್ ಹುಕಂ ಹಾಗೂ ಸ್ಮಶಾನ ಭೂಮಿ ವಿಚಾರ ಉಲ್ಲೇಖಿಸಿದ್ದಾರೆ.

ಲಕ್ಕವಳ್ಳಿ ಸಮೀಪದ ಭದ್ರಾ ಹಿನ್ನೀರಿನಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಕ್ಕವಳ್ಳಿ ಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ಇನ್ನು ಮಾಜಿ ಶಾಸಕ ಶ್ರೀನಿವಾಸ್, ಸೋಮಶೇಕರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು ಇವರ ಆತ್ಮಹತ್ಯೆ ದುರಾದೃಷ್ಟಕರ ಈ ಬಗ್ಗೆ ಬಗರ್ ಹುಕಂ ಕಮಿಟಿಯ ಕಿರುಕುಳ ಶಂಕೆಯಿದೆ. ಸೋಮಶೇಖರ್ ಗೆ ನ್ಯಾಯ ನೀಡಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!