Wednesday, June 3, 2026
Homeಕರಾವಳಿಉಡುಪಿಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ದಿನಾಂಕ ‌ನಿಗದಿ

ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ದಿನಾಂಕ ‌ನಿಗದಿ

- Advertisement -
- Advertisement -

ಬೆಂಗಳೂರು: ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಸೆಪ್ಟಂಬರ್ ನಲ್ಲಿ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ ನಡೆಯಲಿದೆ. ಎರಡು ದಿನಗಳ ಕಾಲ ನಡೆಯಲ್ಲಿರುವ ಎಸ್ಎಸ್ಎಲ್ ಸಿ ಪೂರಕ ಪರೀಕ್ಷೆ, ‌ಸರಳಿಕೃತ ಮಾದರಿಯಲ್ಲಿ ನಡೆಯಲಿದೆ.

ಒಂದು ದಿನ ಕೋರ್ ವಿಷಯಗಳಿಗೆ ಮತ್ತೊಂದು ದಿನ ಭಾಷಾ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. 2020-21 ನೇ ಸಾಲಿನಲ್ಲಿ ಮುಖ್ಯ ಪರೀಕ್ಷೆಗೆ ನೋಂದಾಯಿಸಿಕೊಂಡು ಕೋವಿಡ್ ಕಾರಣದಿಂದ ಗೈರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಯಲಿದೆ.

ಇದರ ಜೊತೆಗೆ ಏಪ್ರಿಲ್ 2019 ರಲ್ಲಿ ಪರೀಕ್ಷೆಗೆ ಪ್ರಥಮ ಬಾರಿಗೆ ನೋಂದಾಯಿಸಿ ಕೋವಿಡ್ ಕಾರಣದಿಂದ ಗೈರಾದ ವಿದ್ಯಾರ್ಥಿಗಳು ಕೂಡಾ ಪರೀಕ್ಷೆ ಬರೆಯಬಹುದು.

ಕಳೆದ ಜುಲೈ ತಿಂಗಳಿನಲ್ಲಿ ನಡೆದ ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಪೂರಕ ಪರೀಕ್ಷೆ ನಡೆಯಲಿದೆ. ಬಹು ಆಯ್ಕೆ ಪಶ್ನೆಗಳ ಪ್ರಶ್ನೆ ಪತ್ರಿಕೆ ಇರಲಿದ್ದು, ಪ್ರತಿ ವಿಷಯಕ್ಕೆ 40 ಅಂಕಗಳಿಗೆ ಸಿಮಿತಗೊಳಿಸಿ ಪರೀಕ್ಷೆ ನಡೆಸಲಾಗುತ್ತದೆ.

- Advertisement -

Latest News

error: Content is protected !!