Friday, May 3, 2024
Homeಕರಾವಳಿನಾಲ್ಕು ತಿಂಗಳುಗಳ ಬಳಿಕ ಯುಎಇಗೆ ಮಂಗಳೂರಿನಿಂದ ವಿಮಾನ ಸಂಚಾರ ಆರಂಭ

ನಾಲ್ಕು ತಿಂಗಳುಗಳ ಬಳಿಕ ಯುಎಇಗೆ ಮಂಗಳೂರಿನಿಂದ ವಿಮಾನ ಸಂಚಾರ ಆರಂಭ

spot_img
- Advertisement -
- Advertisement -

ಮಂಗಳೂರು: ಕೋವಿಡ್ ಟೆಸ್ಟಿಂಗ್ ಮಾಡಲು ಆರ್‌ಟಿ-ಪಿಸಿಆರ್‌ ಪರೀಕ್ಷಾ ಸೌಲಭ್ಯ ಅಳವಡಿಸಿದ ಬಳಿಕ ಕೊಲ್ಲಿ ದೇಶಗಳಿಗೆ ವಿಮಾನ ಸೇವೆಗಳನ್ನು ಮುಂದುವರೆಸಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುಎಇನ ನಾಗರಿಕ ವಿಮಾನಯಾನ ಸಚಿವಾಲಯದ ಸಮ್ಮತಿ ಸಿಕ್ಕಿದೆ.

ನಾಲ್ಕು ತಿಂಗಳ ಬಳಿಕ ಕೊಲ್ಲಿಗೆ ವಿಮಾನಯಾನ ಸೇವೆ ಇಂದಿನಿಂದ ಆರಂಭಗೊಂಡಿದ್ದು ಮಂಗಳೂರಿನಿಂದ ಏರ್‌ ಇಂಡಿಯಾ ಎಕ್ಸ್ಪ್ರೆಸ್ ಮೊದಲಿಗೆ ದುಬಾಯ್‌ನತ್ತ ಹಾರಿದೆ ಎಂದು ವಿಮಾನ ನಿಲ್ದಾಣದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಗತ್ಯ ಮುನ್ನೆಚ್ಚರಿಗಳನ್ನು ತೆಗೆದುಕೊಳ್ಳುವ ಮೂಲಕ ಪ್ರಯಾಣಿಕರ ಸುರಕ್ಷತೆಗೆ ಒತ್ತಿ ನೀಡಿದ ಮಂಗಳೂರು ವಿಮಾನ ನಿಲ್ದಾಣ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ನೆರವಿನಿಂದ ಆರ್‌ಟಿ-ಪಿಸಿಆರ್‌ ಪರೀಕ್ಷಾ ಸೌಲಭ್ಯವನ್ನು ಅಳವಡಿಸಿದೆ.

ತನ್ನಲ್ಲಿಗೆ ಬರುವ ಪ್ರಯಾಣಿಕರು ವಿಮಾನ ಏರುವ ಆರು ಗಂಟೆಗಳ ಮುನ್ನ ಆರ್‌ಟಿ-ಪಿಸಿಆರ್‌ನ ನೆಗಟಿವ್‌ ವರದಿ ಹೊಂದುವುದು ಕಡ್ಡಾಯವೆಂದು ಯುಎಇನ ಇತ್ತೀಚಿನ ಆರೋಗ್ಯ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!