Tuesday, June 9, 2026
Homeಕರಾವಳಿಹುತಾತ್ಮರಾದ ಸೋನಿಯಾ ಗಾಂಧಿ: ಭಾಷಣ ವೇಳೆ ಡಿಕೆಶಿ ಯಡವಟ್ಟು

ಹುತಾತ್ಮರಾದ ಸೋನಿಯಾ ಗಾಂಧಿ: ಭಾಷಣ ವೇಳೆ ಡಿಕೆಶಿ ಯಡವಟ್ಟು

- Advertisement -
- Advertisement -

ಬೆಂಗಳೂರು:ದೇಶಕ್ಕಾಗಿ ಹುತಾತ್ಮ ಸೋನಿಯಾ ಗಾಂಧಿಯವರ ಕೊಡುಗೆ ಅಪಾರ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ತಮ್ಮ ಭಾಷಣದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಭವನದಲ್ಲಿ ದ್ವಜಾರೋಹಣ ನಡೆದ ಬಳಿಕ ಮಾತನಾಡಿದ ಅವರು,ದೇಶಕ್ಕಾಗಿ ಹುತಾತ್ಮ ಸೋನಿಯಾ ಗಾಂಧಿಯವರ ಕೊಡುಗೆ ಅಪಾರ. ಈ ಸಂದರ್ಭದಲ್ಲಿ ನಾವೆಲ್ಲರೂ ಅವರನ್ನು ನೆನಪಿಸಿಕೊಳ್ಳಬೇಕಿದೆ ಎಂದು ಅವರ ಗುಣಗಾನ ಮಾಡಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅವರನ್ನು ಎಚ್ಚರಿಸಿ, ಹುತಾತ್ಮರಾದವರು ಸೋನಿಯಾ ಗಾಂಧಿ ಅಲ್ಲ , ಇಂದಿರಾ ಗಾಂಧಿ ಎಂದರು.ಕೂಡಲೇ ಸಾರಿ, ಸಾರಿ ಎಂದು ಹೇಳಿ ಹುತಾತ್ಮರಾದ ಇಂದಿರಾ ಗಾಂಧಿ ಎಂದು ತಪ್ಪನ್ನು ತಿದ್ದಿಕೊಂಡು ಭಾಷಣವನ್ನು ಮುಂದುವರೆಸಿದ್ದಾರೆ.

ಡಿ.ಕೆ.ಶಿವಕುಮಾರ್, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿ, ಹೋರಾಡಿದ ಕಾಂಗ್ರೆಸ್ ನಾಯಕರನ್ನು ನೆನೆದರು. ಟೀಕೆ ಟಿಪ್ಪಣಿಗಳು ಸಹಜ. ಎಲ್ಲಾ ಸವಾಲುಗಳನ್ನು ಎದುರಿಸಿ ನಿಂತು ಹಲವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ದೇಶ ಕಟ್ಟಿದ್ದಾರೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ಧ ನಾವು ಹೋರಾಡಬೇಕಿದೆ ಎಂದರು.

ಇಂದೀರಾ ಕ್ಯಾಂಟೀನ್ ಹೆಸರು ಬದಲಿಸುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಇವರು, ಮತಿಗೇಡಿಗಳು ಇಂದೀರಾ ಕ್ಯಾಂಟೀನ್ ಹೆಸರನ್ನು ಬದಲಾವಣೆ ಮಾಡಲು ಹೊರಟಿದ್ದಾರೆ. ಅವರ ಇತಿಹಾಸ ತಿಳಿಯದೆ ಕೈ ಹಾಕಿದ್ದಾ ಕಾಂಗ್ರೆಸ್ ಕಟ್ಟುವ ಕೆಲಸ ಮಾಡಿದೆ. ಈ ಹೆಸರು ಬದಲಾ ವಿರುದ್ಧ ಹೋರಾಡೋಣ ಎಂದರು.

ಸ್ವಾತಂತ್ರ್ಯ ಹೋರಾಟವನ್ನು ಜಾತಿ, ಧರ್ಮದ ಆಧಾರದ ಮೇಲೆ ಬಳಸಿಕೊಳ್ಳುತ್ತಿರುವುದು ದುರ್ದೈವ. ಕಾರ್ಯಕರ್ತರೆಲ್ಲರೂ ಒಗ್ಗಟ್ಟಿನಿಂದ ಸಾಗಿ ಪಕ್ಷ ಕಟ್ಟಿ ಮತ್ತೊಮ್ಮೆ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಇಂದಿರಾಗಾಂಧಿಯವರ ಕನಸು ನನಸು ಮಾಡಬೇಕಿದೆ ಎಂದು ಹೇಳಿದರು.

- Advertisement -

Latest News

error: Content is protected !!