Saturday, June 6, 2026
Homeಕರಾವಳಿಉಡುಪಿಉಡುಪಿ: ಕೆನರಾ ಬ್ಯಾಂಕ್ ಎ.ಟಿ.ಎಂ.ನಿಂದ ಹಣ ದರೋಡೆಗೆ ಯತ್ನ!

ಉಡುಪಿ: ಕೆನರಾ ಬ್ಯಾಂಕ್ ಎ.ಟಿ.ಎಂ.ನಿಂದ ಹಣ ದರೋಡೆಗೆ ಯತ್ನ!

- Advertisement -
- Advertisement -

ಕೋಟ : ಕೆನರಾ ಬ್ಯಾಂಕ್ ಎ.ಟಿ.ಎಂ.ನಿಂದ ಹಣ ದರೋಡೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ಸಾಸ್ತಾನ ಸಮೀಪದ ಮಾಬುಕಳದಲ್ಲಿ ಸಂಭವಿಸಿದೆ.

ಸಿ.ಸಿ. ಟಿವಿಯ ವೈಯರ್ ಕಡಿತಗೊಳಿಸಿ ಒಳನುಗ್ಗಿದ ದುಷ್ಕರ್ಮಿಗಳು ಯಂತ್ರವನ್ನು ಒಡೆದು ಹಣದೋಚಲು ಯತ್ನಿಸಿದ್ದಾರೆ ಹಾಗೂ ಒಳಗಡೆ ಇದ್ದ ಎ.ಸಿ.ಯನ್ನು ಕದ್ದೊಯ್ಯಲು ವಿಫಲ ಯತ್ನ ನಡೆಸಿದ್ದಾರೆ.

ಗ್ರಾಹಕರೋರ್ವರು ಶುಕ್ರವಾರ ಬೆಳಗ್ಗೆ ಹಣ ತೆಗೆಯಲು ಎ.ಟಿ.ಎಂ ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ತತ್‍ ಕ್ಷಣ ಕೋಟ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಗಿದ್ದು, ಇದೀಗ ಹೆಚ್ಚಿನ ತನಿಖೆ
ನಡೆಯುತ್ತಿದೆ.

ಯಂತ್ರದಲ್ಲಿ ಠೇವಣಿ ಮಾಡಲಾದ ಹಣ ಹಾಗೂ ನಗದೀಕರಿಸಲ್ಪಟ್ಟ ಹಣದ ಲೆಕ್ಕಚಾರ ನಡೆಯುತ್ತಿದ್ದು ಕಳವಾದ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -

Latest News

error: Content is protected !!