Saturday, June 6, 2026
Homeಕರಾವಳಿಕಾರ್ಕಳದಲ್ಲಿ ಸಾಲ ತೀರಿಸಲಾಗದೆ ಟೈಲರ್ ಆತ್ಮಹತ್ಯೆ

ಕಾರ್ಕಳದಲ್ಲಿ ಸಾಲ ತೀರಿಸಲಾಗದೆ ಟೈಲರ್ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಕೊರೊನಾದಿಂದಾಗಿ  ಕೆಲಸ ಇಲ್ಲದೆ ಸಾಲ ತೀರಿಸಲಾಗದ ಚಿಂತೆ ಯಲ್ಲಿ ಟೈಲರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳದ  ವರಂಗ ಗ್ರಾಮದ ಮೂಡುಕುಡೂರು ಎಂಬಲ್ಲಿ ನಡೆದಿದೆ.

ಮೃತರನ್ನು ಮೂಡುಕುಡೂರು ನಿವಾಸಿ ಪುಟ್ಟಪ್ಪ ಪೂಜಾರಿ ಎಂಬವರ ಮಗ ಅಶೋಕ ಪೂಜಾರಿ(38) ಎಂದು ಗುರುತಿಸಲಾಗಿದೆ.

ಟೈಲರಿಂಗ್ ಮಾಡಿಕೊಂಡಿದ್ದ ಇವರು ಕೋವಿಡ್ ಕಾರಣದಿಂದ ಕಳೆದ ಮೂರು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದರು.  ಕೆಲವು ಕಡೆಗಳಲ್ಲಿ ಕೈಸಾಲವನ್ನು ಮಾಡಿಕೊಂಡಿದ್ದರು. ಇದನ್ನು ತೀರಿಸಲಾಗದೆ ಮನನೊಂದ ಅವರು, ಮನೆಯ ಹಿಂದೆ ಹಟ್ಟಿಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!