Tuesday, August 25, 2026
Homeಕರಾವಳಿಆಗಸ್ಟ್ 16 ರಿಂದ ಮಂಗಳೂರು- ಮಡಗಾಂವ್ ನಡುವೆ ನೂತನ ರೈಲು ಸಂಚಾರ!!

ಆಗಸ್ಟ್ 16 ರಿಂದ ಮಂಗಳೂರು- ಮಡಗಾಂವ್ ನಡುವೆ ನೂತನ ರೈಲು ಸಂಚಾರ!!

- Advertisement -
- Advertisement -

ಕಾರವಾರ:ಆಗಸ್ಟ್ 16ರಿಂದ ಪ್ರತಿ ದಿನ ಮಂಗಳೂರು ಸೆಂಟ್ರಲ್- ಮಡಗಾಂವ್ ಜಂಕ್ಷನ್ ನಡುವೆ ಹೊಸ ರೈಲಿನ ಸಂಚಾರವನ್ನು ಕೊಂಕಣ ರೈಲ್ವೆ ಬುಧವಾರ ಪ್ರಕಟಿಸಿದೆ.

06602 ಸಂಖ್ಯೆಯ ರೈಲು ಮಂಗಳೂರು ಸೆಂಟ್ರಲ್‌ನಿಂದ ಬೆಳಿಗ್ಗೆ 5.30ಕ್ಕೆ ಪ್ರಯಾಣ ಆರಂಭಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಮಡಗಾಂವ್ ತಲುಪಲಿದೆ. 06601 ಸಂಖ್ಯೆಯ ರೈಲು ಮಧ್ಯಾಹ್ನ 2.30ಕ್ಕೆ ಮರುಪ್ರಯಾಣ ಆರಂಭಿಸಲಿದ್ದು, ರಾತ್ರಿ 9.40ಕ್ಕೆ ಮಂಗಳೂರು ತಲುಪಲಿದೆ. ನವೆಂಬರ್ 1 ರಿಂದ ರೈಲು ಮಧ್ಯಾಹ್ನ 2 ಗಂಟೆಗೆ ಮಡಗಾಂವ್ ನಿಂದ ರಾತ್ರಿ 09 :05 ಕ್ಕೆ ಮಂಗಳೂರಿಗೆ ತಲುಪುತ್ತದೆ.

ರೈಲುಗಳು ಮಂಗಳೂರು ಜಂಕ್ಷನ್, ತೋಕೂರು, ಸುರತ್ಕಲ್, ಮುಲ್ಕಿ, ನಂದಿಕೂರು, ಪಡುಬಿದ್ರಿ, ಇನ್ನಂಜೆ, ಉಡುಪಿ, ಬಾರ್ಕೂರು, ಕುಂದಾಪುರ, ಸೇನಾಪುರ, ಬಿಜೂರ್, ಶಿರೂರು, ಭಟ್ಕಳ, ಚಿತ್ರಾಪುರ, ಮುರುಡೇಶ್ವರ, ಮಂಕಿ, ಹೊನ್ನಾವರ, ಕುಮಟಾ, ಮಿರ್ಜಾನ್, ಗೋಕರ್ಣ ರೋಡ್, ಅಂಕೋಲಾ, ಹಾರವಾಡ, ಕಾರವಾರದಲ್ಲಿ ನಿಲುಗಡೆಯಿದೆ ಎಂದು ಪ್ರಕಟಣೆ ತಿಳಿಸಿದೆ. ಅಲ್ಲದೆ ಪ್ರಯಾಣಿಕರು ತಮ್ಮ ಪ್ರಯಾಣಕ್ಕಾಗಿ ಮುಂಗಡ ಕಾಯ್ದಿರಿಸುವಿಕೆಯನ್ನು ಮಾಡಬೇಕು ಹಾಗೂ ಎಲ್ಲ ಕೋವಿಡ್-19 ನಿಯಮವನ್ನು ಅನುಸರಿಸಬೇಕು ಎಂದು ತಿಳಿಸಿದೆ.

- Advertisement -

Latest News

error: Content is protected !!