Saturday, June 6, 2026
HomeWorldಅತ್ಯಾಧುನಿಕ ಇಒಎಸ್-3 ಉಪಗ್ರಹ ಉಡಾವಣೆ; ತಾಂತ್ರಿಕ ದೋಷದಿಂದ ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲ!

ಅತ್ಯಾಧುನಿಕ ಇಒಎಸ್-3 ಉಪಗ್ರಹ ಉಡಾವಣೆ; ತಾಂತ್ರಿಕ ದೋಷದಿಂದ ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲ!

- Advertisement -
- Advertisement -

ಆಂಧ್ರಪ್ರದೇಶ: ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಭೂಮಿಯ ಅವಲೋಕನ ಉಪಗ್ರಹ ಇಒಎಸ್​-3 ಇಂದು ಬೆಳಿಗ್ಗೆ 5.45ಕ್ಕೆ ಸತೀಶ್ ಧವನ್ ಬಾಹ್ಯಜಾಶ ಕೇಂದ್ರದಿಂದ ಉಡಾವಣೆಯಾಗಿತ್ತು. ಆದರೆ ಉಪಗ್ರಹ ಕಕ್ಷೆಗೆ ತಲುಪುವಲ್ಲಿ ಮತ್ತೆ ವಿಫಲವಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆ ಟ್ವೀಟ್ ಮಾಡಿದೆ.

ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತೆಂದು ಇಸ್ರೋ ಹೇಳಿದ್ದು, ನಂತರದ ಹಂತದಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ ಎಂದು ಹೇಳಿದೆ. “ಜಿಎಸ್ಎಲ್ ವಿ -F10 ಉಡಾವಣೆ ಇಂದು ನಿಗದಿಯಂತೆ 05 :43 ರ ಬೆಳಗ್ಗೆ ನಡೆಯಿತು. ಮೊದಲ ಮತ್ತು ಎರಡನೇ ಹಂತಗಳ ಕಾರ್ಯಕ್ಷಮತೆ ಸಾಮಾನ್ಯವಾಗಿದೆ. ಆದಾಗ್ಯೂ, ತಾಂತ್ರಿಕ ಅಸಂಗತತೆಯಿಂದಾಗಿ ಕ್ರಯೋಜೆನಿಕ್ ಮೇಲಿನ ಹಂತದ ಇಗ್ನಿಷನ್ ಆಗಲಿಲ್ಲ. ಉದ್ದೇಶವನ್ನು ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದೆ.

- Advertisement -

Latest News

error: Content is protected !!