- Advertisement -
![]()
- Advertisement -
ಮಂಗಳೂರು: ಕೊರೊನಾದಿಂದಾಗಿ ಪ್ರತಿಯೊಬ್ಬರು ಎಂತಹ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುವುದನ್ನು ನಾವು ಪ್ರತಿ ದಿನ ನೋಡುತ್ತಲೇ ಇದ್ದೇವೆ. ಎಲ್ಲಾ ಕ್ಷೇತ್ರಗಳಿಗೂ ತನ್ನ ಕರಿಛಾಯೆಯನ್ನು ಹರಡಿದೆ ಈ ಮಹಾಮಾರಿ. ಅದರಲ್ಲೂ ವ್ಯವಹಾರ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತವನ್ನೇ ಕೊಟ್ಟಿದೆ ಕೊರೊನಾ.
ಕೊರೊನಾದಿಂದಾಗಿ ಸಾಕಷ್ಟು ಮಂದಿ ಆನ ಲೈನ್ ಶಾಂಪಿಂಗ್ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ವ್ಯಾಪಾರವನ್ನೇ ನಂಬಿ ಬದುಕು ಅದೆಷ್ಟೋ ಅಂಗಡಿ ವ್ಯಾಪಾರಸ್ಥರು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಆನ್ ಲೈನ್ ಶಾಂಪಿಂಗ್ ಮಾಡುವುದು ಎಷ್ಟರಮಟ್ಟಿಗೆ ಸರಿ ಅಂತಾ ನಟ ಶಿವಧ್ವಜ್ ಶೆಟ್ಟಿ ಅವರು ಕರಾವಳಿಯ ವ್ಯಾಪಾರಸ್ಥರ ಪರವಾಗಿ ಮಾತನಾಡಿದ್ದಾರೆ. ಅಗತ್ಯವಿದ್ದರಷ್ಟೇ ಆನ್ ಲೈನ್ ಶಾಪಿಂಗ್ ಮಾಡಿ ಇಲ್ಲ ಅಂದರೆ ಅಂಗಡಿಗಳಲ್ಲೇ ಖರೀದಿಸಿ ನಮ್ಮವರ ಜೊತೆ ನಾವಿರೋಣ ಎಂದು ವಿಡಿಯೋ ಮೂಲಕ ಅರ್ಥಪೂರ್ಣ ಸಂದೇಶ ನೀಡಿದ್ದಾರೆ.
- Advertisement -


