Friday, June 5, 2026
Homeಕರಾವಳಿರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಿಗಲಿದೆ ಸ್ಕಾಲರ್ ಶಿಪ್: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಸಿಗಲಿದೆ ಸ್ಕಾಲರ್ ಶಿಪ್: ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ

- Advertisement -
- Advertisement -

ಬೆಂಗಳೂರು: ರೈತರ ಮಕ್ಕಳ ಹೆಚ್ಚಿನ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪ್ರೋತ್ಸಾಹಿಸಲು ಹೊಸ ಸ್ಕಾಲರ್ ಶಿಪ್ ಯೋಜನೆ ಜಾರಿಗೆ ಬಂದಿದೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ದಿನ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ.

10ನೇ ತರಗತಿ ಪೂರ್ಣಗೊಳಿಸಿದ ನಂತರ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತ ನೋಂದಣಿಯಾಗಿರುವ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ಪ್ರವೇಶ ಪಡೆದಿರುವ ರೈತರ ಮಕ್ಕಳ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ ಆಗಲಿದ್ದು 2021-22ನೇ ಸಾಲಿನಿಂದ ಜಾರಿಗೆ ಬರಲಿದೆ.

ರೈತರು ಉಳುಮೆ ಮಾಡುವಂತಹ ಅಥವಾ ಕೃಷಿ ಮಾಡುವಂತಹ ಜಮೀನನ್ನು ತಮ್ಮ ಹೆಸರಿನಲ್ಲಿ ಹೊಂದಿರಬೇಕಾಗುತ್ತದೆ. ಪಿಯುಸಿ, ಐಟಿಐ, ಡಿಪ್ಲೋಮಾ ಓದುವ ರೈತ ಮಕ್ಕಳಿಗೆ ಹುಡುಗರಿಗೆ 2500 ರೂ. ಹುಡುಗಿಯರಿಗೆ 3000 ರೂ, ಬಿಎ, ಬಿಎಸ್ಸಿ, ಬಿಕಾಂ ಪದವಿ ಓದುವ ರೈತ ಮಕ್ಕಳಿಗೆ ಹುಡುಗರಿಗೆ 5000 ರೂ. ಹುಡುಗಿಯರಿಗೆ 5500 ರೂ., ಎಲ್ ಎಲ್ ಬಿ, ಪ್ಯಾರಾ ಮೆಡಿಕಲ್, ಬಿ ಫಾರ್ಮಾ, ನರ್ಸಿಂಗ್ ಕೋರ್ಸ್ ಓದುವ ರೈತರ ಮಕ್ಕಳು ಹುಡುಗರಿಗೆ 7500 ರೂ. ಹುಡುಗಿಯರಿಗೆ 8000 ರೂ. ಸಿಗಲಿದೆ.

ಎಂಬಿಬಿಎಸ್, ಬಿಇ, ಬಿ.ಟೆಕ್ ಸೇರಿ ಸ್ನಾತಕೋತ್ತರ ಕೋರ್ಸ್ ಗಳಿಗೆ 10 ಸಾವಿರ ರೂ. ಹುಡುಗಿಯರಿಗೆ 11 ಸಾವಿರ ರೂ‌. ಸಿಗಲಿದೆ. ಅಧಿಕೃತವಾಗಿ ಕೃಷಿ ಜಮೀನು ಹೊಂದಿದ ರೈತ ಮಕ್ಕಳಿಗೆ ಸ್ಕಾಲರ್ ಶಿಪ್ ಅನುಕೂಲವಾಗಲಿದೆ.

- Advertisement -

Latest News

error: Content is protected !!