Thursday, June 4, 2026
Homeಕರಾವಳಿಉಡುಪಿದಕ್ಷಿಣ ಕರಾವಳಿಯ ಕಥಾ ಹಂದರ ಹೊಂದಿರುವ ಚಿತ್ರ 'ಕಾಂತಾರ'

ದಕ್ಷಿಣ ಕರಾವಳಿಯ ಕಥಾ ಹಂದರ ಹೊಂದಿರುವ ಚಿತ್ರ ‘ಕಾಂತಾರ’

- Advertisement -
- Advertisement -

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್ ತನ್ನ ಹನ್ನೊಂದನೇ ಚಿತ್ರವನ್ನು ಅನೌನ್ಸ್ ಮಾಡಿದ್ದು, ಈಗಾಗಲೇ ತಮ್ಮ ನಟನೆ ಹಾಗೂ ನಿರ್ದೇಶನದಿಂದ ಚಂದನವನದಲ್ಲಿ ಭರವಸೆ ಮೂಡಿಸಿರುವ ಕರಾವಳಿಯ ಪ್ರತಿಭೆ ರಿಷಬ್ ಶೆಟ್ಟಿ, ಹೊಂಬಾಳೆಯೊಂದಿಗೆ ಕೈಜೋಡಿಸಲಿದ್ದಾರೆ. ನೂತನ ಚಿತ್ರಕ್ಕೆ ‘ಕಾಂತಾರ’ ಎಂದು ಹೆಸರಿಡಲಾಗಿದ್ದು, ಇದು ಸಂಪೂರ್ಣ ಕರಾವಳಿ ಭಾಗದಲ್ಲಿ ನಡೆಯುವ ಕತೆ ಎಂದಿದ್ದಾರೆ ರಿಷಬ್.

ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಆಗಸ್ಟ್ 27ರಿಂದ ಚಿತ್ರತಂಡ ಶೂಟಿಂಗ್ ಪ್ರಾರಂಭಿಸಲಿದೆ.

ದಕ್ಷಿಣ ಕರಾವಳಿಯ ಸುತ್ತ ಮುತ್ತ ನಡೆಯುವ ಕತೆ ಇದಾಗಿದ್ದು, ಸಂಪೂರ್ಣವಾಗಿ ಅಲ್ಲಿನ ಜನ ಜೀವನ, ಸಂಸ್ಕೃತಿ, ಭಾಷೆಯನ್ನು ಒಳಗೊಂಡಿರುತ್ತದೆ ಎಂದಿದ್ದಾರೆ. ಪೋಸ್ಟರ್​ನಲ್ಲಿ ಕಂಬಳದ ಚಿತ್ರವಿರುವ ಕಾರಣ, ಸಂಪೂರ್ಣ ಕಂಬಳದ ಕುರಿತಾಗಿಯೇ ಕತೆ ಇದೆಯೇ ಎಂಬ ಪ್ರಶ್ನೆಗೆ ಇಲ್ಲ ಎನ್ನುತ್ತಾರೆ ರಿಷಬ್. ಇದು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಕತೆ. ಕರಾವಳಿಯ ಜನಜೀವನವೂ ಕತೆಯಲ್ಲಿರುವುದರಿಂದ ಕಂಬಳವೂ ಚಿತ್ರದಲ್ಲಿ ಬರುತ್ತದೆ. ಆದರೆ ಸಂಪೂರ್ಣ ಅದರ ಕುರಿತಾಗಿಯೇ ಕತೆ ಸಾಗುವುದಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

- Advertisement -

Latest News

error: Content is protected !!