Sunday, June 7, 2026
Homeಕರಾವಳಿಕರಾವಳಿಯಲ್ಲಿ ಎನ್‌ಐಎ ಕೇಂದ್ರ ಸ್ಥಾಪನೆಗೆ ಯತ್ನ; ಕೋಟ ಶ್ರೀನಿವಾಸ ಪೂಜಾರಿ

ಕರಾವಳಿಯಲ್ಲಿ ಎನ್‌ಐಎ ಕೇಂದ್ರ ಸ್ಥಾಪನೆಗೆ ಯತ್ನ; ಕೋಟ ಶ್ರೀನಿವಾಸ ಪೂಜಾರಿ

- Advertisement -
- Advertisement -

ಮಂಗಳೂರು:ಕರಾವಳಿ ಭಾಗದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದು, ಭಟ್ಕಳದಿಂದ ಕೇರಳದ ವರೆಗೂ ಭಯೋತ್ಪಾದಕರ ಸಂಪರ್ಕ ಕೊಂಡಿ ಹಬ್ಬಿದೆ. ಈ ಸಂಬಂಧ ಕರಾವಳಿಯಲ್ಲಿ ಎನ್‌ಐಎ ಶಾಶ್ವತ ಕೇಂದ್ರ ಸ್ಥಾಪನೆಯ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಮಟ್ಟಹಾಕಲು ಸರ್ಕಾರ ಆದ್ಯತೆ ನೀಡಲಿದೆ ಎಂದರು.

ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂವರಿಗೆ ಸಚಿವ ಸ್ಥಾನ ಸಿಕ್ಕಿದ್ದು, ಮೂವರು ಒಟ್ಟಾಗಿ ಜನರ ಸಮಸ್ಯೆಗೆ ಸ್ಪಂದಿಸುತ್ತೇವೆ. ಪಾರದರ್ಶಕ, ಜನಪರ ಮತ್ತು ಕ್ರಿಯಾಶೀಲ ಆಡಳಿತ ನೀಡುವುದು ಗುರಿ. ಯಾರು ಯಾವ ಖಾತೆ ನಿಭಾಯಿಸಬಲ್ಲರು ಎಂದು ನಿರ್ಧರಿಸಿ ಮುಖ್ಯಮಂತ್ರಿ ಖಾತೆ ಹಂಚಿಕೆ ಮಾಡಲಿದ್ದು, ಸಿಗುವ ಖಾತೆಯಲ್ಲಿ ಜನಪರ ಕೆಲಸ ಮಾಡುತ್ತೇನೆ ಎಂದರು

- Advertisement -

Latest News

error: Content is protected !!