Saturday, June 6, 2026
Homeಉದ್ಯಮಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಿಲ್ಲ!: ಕೊಡಗು ಡಿಸಿ ಹೊಸ ಆದೇಶ

ಪ್ರವಾಸಿಗರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಿಲ್ಲ!: ಕೊಡಗು ಡಿಸಿ ಹೊಸ ಆದೇಶ

- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಕೋವಿಡ್ ನಿಯಮ ಬದಲಾಗಿದೆ. ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯವಿಲ್ಲ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹೊಸ ಆದೇಶ ಹೊರಡಿಸಿದ್ದಾರೆ.

ಈ ಮೊದಲು ಆರ್ ಟಿಪಿಸಿಆರ್ ನೆಗೆಟಿವ್ ವರದಿಯನ್ನು ಜಿಲ್ಲಾಧಿಕಾರಿ ಕಡ್ಡಾಯಗೊಳಿಸಿದ್ದರು. ನೆಗೆಟಿವ್ ವರದಿ ಇಲ್ಲಾಂದ್ರೆ ವಾಸ್ತವ್ಯಕ್ಕೂ‌ ಅವಕಾಶ ಇರಲಿಲ್ಲ. ಇದರಿಂದಾಗಿ‌ ಪ್ರವಾಸಿಗರು ಪರದಾಡಿದ್ದರಲ್ಲದೇ, ಪ್ರವಾಸ ಮಾಡಲಾಗದೇ ನಿರಾಶೆಯಿಂದ ಪ್ರವಾಸಿಗರು ಹಿಂದಿರುಗುವಂತಾಗಿತ್ತು.

ಇದರಿಂದಾಗಿ ಎರಡು ದಿನಗಳ ಬಳಿಕ ಆದೇಶ ಹಿಂಪಡೆದ ಡಿಸಿ ಚಾರುಲತಾ ಸೋಮಲ್, ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೆ ಕೊಡಗು ಜಿಲ್ಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ.

- Advertisement -

Latest News

error: Content is protected !!