Sunday, June 7, 2026
Homeಕ್ರೀಡೆಟೋಕಿಯೋ ಒಲಿಂಪಿಕ್ಸ್: ಫೈನಲ್ ಪ್ರವೇಶಿಸಿದ ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾ!

ಟೋಕಿಯೋ ಒಲಿಂಪಿಕ್ಸ್: ಫೈನಲ್ ಪ್ರವೇಶಿಸಿದ ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾ!

- Advertisement -
- Advertisement -

ಟೋಕಿಯೋ: ಭಾರತದ ಭರವಸೆಯಾಗಿರುವ ಕುಸ್ತಿಪಟು ರವಿಕುಮಾರ್ ದಹಿಯಾ, ಪುರುಷರ 57 ಕೆ.ಜಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಪುರುಷರ 57 ಕೆ.ಜಿ. ವಿಭಾಗದ ಕುಸ್ತಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ರವಿ ಕುಮಾರ್ ದಹಿಯಾ ಕಜಕಿಸ್ತಾನದ ಸನವ್ಯಾವ್ ಎದುರು ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಹೋರಾಟ ನಡೆಸುವ ಮೂಲಕ ಫೈನಲ್‌ ಪ್ರವೇಶಿಸಿ ಇತಿಹಾಸ ನಿರ್ಮಿಸಿದ್ದಾರೆ.

ಆರಂಭದಿಂದಲೇ ಕಜಕಿಸ್ತಾನದ ಕುಸ್ತಿಪಟು 9-2 ಅಂತರದ ಮುನ್ನಡೆ ಸಾಧಿಸಿದ್ದರು. ಆದರೆ ಕೊನೆಯ 30 ಸೆಕೆಂಡ್‌ಗಳಲ್ಲಿ ರೋಚಕ ಪೈಪೋಟಿ ನೀಡುವ ಮೂಲಕ ಫಲಿತಾಂಶ ತನ್ನತ್ತ ವಾಲುವಂತೆ ಮಾಡಿಕೊಳ್ಳುವಲ್ಲಿ ದಹಿಯಾ ಯಶಸ್ವಿಯಾಗಿದ್ದಾರೆ.57 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ಕುಸ್ತಿ ಫೈನಲ್‌ನಲ್ಲಿ ರವಿ ಕುಮಾರ್ ದಹಿಯಾ ರಷ್ಯಾ ಒಲಿಂಪಿಕ್ಸ್‌ ಕಮಿಟಿಯ ಜೌವೋರ್ ಉಗುವ್ ಅವರನ್ನು ಎದುರಿಸಲಿದ್ದಾರೆ. ಈ ಫೈನಲ್ ಪಂದ್ಯವು ಆಗಸ್ಟ್‌ 05ರ ಸಂಜೆ 4.10ಕ್ಕೆ ಆರಂಭವಾಗಲಿದೆ

- Advertisement -

Latest News

error: Content is protected !!