Thursday, June 4, 2026
Homeಕ್ರೀಡೆಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟ ಪಿ.ವಿ.ಸಿಂಧು

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟ ಪಿ.ವಿ.ಸಿಂಧು

- Advertisement -
- Advertisement -

ನವದೆಹಲಿ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪಿ.ಪಿ. ಸಿಂಧು ಕಂಚಿನ ಗೆದ್ದಿದ್ದಾರೆ. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಪಂದ್ಯದಲ್ಲಿ ಬಿಂಗ್ಜಿಯಾವೋ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಈ ಗೆಲುವಿನೊಂದಿಗೆ ಸಿಂಧು ಒಲಿಂಪಿಕ್ಸ್ ನಲ್ಲಿ ಎರಡನೇ ಬಾರಿಗೆ ಪದಕ ಗೆದ್ದ ಕೀರ್ತಿಗೆ ಪಾತ್ರರಾಗಿದ್ದಾರೆ. 2016 ರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಸಿಂಧು ಬೆಳ್ಳಿ ಪದಕ ಗೆದ್ದಿದ್ದರು.

ಮಹಿಳಾ ಸಿಂಗಲ್ಸ್ ವಿಭಾಗದ ಕಂಚಿನ ಪದಕಕ್ಕಾಗಿನ ಪಂದ್ಯದಲ್ಲಿ ಸಿಂಧು ಚೀನಾದ ಹಿ ಬಿಂಗ್‌ಜಿಯಾವೊ ವಿರುದ್ಧ 21-13, 21-15ರ ಅಂತರದಲ್ಲಿ ಗೆಲುವು ದಾಖಲಿಸಿದರು.

ಪಂದ್ಯದ ಆರಂಭದಿಂದಲೇ ಹಿಡಿತ ಸಾಧಿಸಿದ ಸಿಂಧು, ಆಕ್ರಮಕಾರಿ ಆಟಕ್ಕೆ ಒತ್ತು ನೀಡಿದರು. ಮೊದಲ ಸೆಟ್‌ನಲ್ಲಿ ಒಂದು ಹಂತದಲ್ಲಿ 14-8 ಮುನ್ನಡೆ ಕಾಯ್ದುಕೊಂಡರು. ಇಲ್ಲಿಂದ ಬಳಿಕ ಎದುರಾಳಿ ಮೇಲೆ ಮತ್ತಷ್ಟು ಒತ್ತಡ ಸೃಷ್ಟಿ ಮಾಡಿದ್ದರಲ್ಲದೆ 21-13ರ ಅಂತರದಲ್ಲಿ ಸುಲಭವಾಗಿ ಸೆಟ್ ಗೆದ್ದರು.

ದ್ವಿತೀಯ ಸೆಟ್‌ನಲ್ಲೂ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಸಿಂಧು ಆರಂಭಿಕ ಮುನ್ನಡೆ ಗಳಿಸಿದರು. ಆದರೆ ಬಿಂಗ್‌ಜಿಯಾವೊ ತಿರುಗೇಟು ನೀಡಿದರು. ಇದರಿಂದ ಪಂದ್ಯ ಮತ್ತಷ್ಟು ರೋಚಕ ಹಂತವನ್ನು ತಲುಪಿತು. ಆದರೂ ಛಲ ಬಿಡದ ಸಿಂಧು ವಿರಾಮದ ವೇಳೆ 11-8ರ ಮುನ್ನಡೆ ಗಳಿಸಿದರು. ಅಲ್ಲಿಂದ ಬಳಿಕ ಹಿಂತಿರುಗಿ ನೋಡದ ಸಿಂಧೂ ಎರಡನೇ ಸೆಟ್ ಅನ್ನು 21-15ರ ಅಂತರದಲ್ಲಿ ಗೆದ್ದು ಕಂಚಿನ ಪದಕ ತಮ್ಮದಾಗಿಸಿದರು.

- Advertisement -

Latest News

error: Content is protected !!