Friday, June 5, 2026
Homeಕರಾವಳಿಉಡುಪಿಮಲ್ಪೆ: ಸಮುದ್ರಕ್ಕಿಳಿಯದಂತೆ ಎಚ್ಚರಿಸಿದರು ನೀರಿಗಿಳಿದ ಯುವತಿ ಸಮುದ್ರಪಾಲು!

ಮಲ್ಪೆ: ಸಮುದ್ರಕ್ಕಿಳಿಯದಂತೆ ಎಚ್ಚರಿಸಿದರು ನೀರಿಗಿಳಿದ ಯುವತಿ ಸಮುದ್ರಪಾಲು!

- Advertisement -
- Advertisement -

ಉಡುಪಿ: ಸ್ಥಳೀಯರು ನೀರಿಗಿಳಿಯಂತೆ ಎಚ್ಚರಿಕೆ ನೀಡಿದ್ದರು ಅದನ್ನು ಲೆಕ್ಕಿಸದೆ ನೀರಿಗಿಳಿದ ಯುವತಿಯೋರ್ವಳು ನೀರುಪಾಲಾದ ಘಟನೆ ಮಲ್ಪೆ ಕಡಲ ತೀರದಲ್ಲಿ ರವಿವಾರ ಸಂಭವಿಸಿದೆ.

ಕೊಡಗು ಮೂಲದ ಮೂವರು ಯುವತಿಯರು ಹಾಗೂ ಒರ್ವ ಯುವಕ ಮುಂಜಾನೆ ಮಲ್ಪೆ ಬೀಚ್ ಗೆ ಆಗಮಿಸಿದ್ದು, ನೀರಿನಲ್ಲಿ ಆಟವಾಡುತ್ತಿದ್ದರು. ಸ್ಥಳೀಯರು ನೀರಿಗೆ ಹೋಗದಂತೆ ಎಚ್ಚರಿಕೆ ನೀಡಿದ್ದರೂ ಅದನ್ನು ಕೇಳದೆ ನೀರಿಗಿಳಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ನಾಲ್ಕು ಮಂದಿಯ ಪೈಕಿ ಒರ್ವ ಯುವತಿ ನಾಪತ್ತೆಯಾಗಿದ್ದರೆ, ಉಳಿದವರನ್ನು ಸ್ಥಳೀಯರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!