Thursday, June 4, 2026
Homeಕರಾವಳಿಸುಬ್ರಹ್ಮಣ್ಯ: ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ;ಗ್ರಾಮಸ್ಥರಲ್ಲಿ ಆತಂಕ!

ಸುಬ್ರಹ್ಮಣ್ಯ: ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆ ದಾಳಿ;ಗ್ರಾಮಸ್ಥರಲ್ಲಿ ಆತಂಕ!

- Advertisement -
- Advertisement -

ಸುಬ್ರಹ್ಮಣ್ಯ:ಹಟ್ಟಿಯಲ್ಲಿದ್ದ ಕರುವಿನ ಮೇಲೆ ಚಿರತೆಯೊಂದು ದಾಳಿ ಮಾಡಿ ತಿಂದ ಘಟನೆ ಕಲ್ಮಕಾರು ಗ್ರಾಮದಲ್ಲಿ ನಡೆದಿದೆ.

ಸುಬ್ರಹ್ಮಣ್ಯ ಸಮೀಪದ ಕಲ್ಮಕಾರು ಗ್ರಾಮದ ಮಾಡಬಾಕಿಲು ನಿವಾಸಿ ಲಾವಣ್ಯ ಮಹೇಶ್ ಎಂಬವರ ಹಟ್ಟಿಯಲ್ಲಿ ದನ ಕರುಗಳನ್ನು ಕಟ್ಟಿ ಹಾಕಲಾಗಿತ್ತು ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ಹಟ್ಟಿಗೆ ತೆರಳಿದಾಗ ಕರುವನ್ನು ಸೀಳಿ ಅರ್ಧ ತಿಂದಿರುವುದು ಗಮನಕ್ಕೆ ಬಂದಿದೆ.ಹಟ್ಟಿಯಲ್ಲಿ ಇನ್ನೂ ದನ ಕರುಗಳಿದ್ದು ಮನೆಯವರು ಆತಂಕಗೊಂಡಿದ್ದಾರೆ.

ಈ ಭಾಗದಲ್ಲಿ ಚಿರತೆ ಇರುವ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು, ಚಿರತೆಯೇ ಕರುವನ್ನು ತಿಂದಿರುವುದಾಗಿ ಶಂಕಿಸಲಾಗಿದೆ. ಸದ್ಯ ಗ್ರಾಮಸ್ಥರಲ್ಲಿ ಆತಂಕಕ್ಕೆ ಶುರುವಾಗಿದೆ.

- Advertisement -

Latest News

error: Content is protected !!