Thursday, June 4, 2026
Homeಚಿಕ್ಕಮಗಳೂರುಆಂಜನೇಯನ ಬಳಿ ಪ್ರತ್ಯಕ್ಷವಾದ ಕಾಡುಕೋಣಗಳ ಹಿಂಡು

ಆಂಜನೇಯನ ಬಳಿ ಪ್ರತ್ಯಕ್ಷವಾದ ಕಾಡುಕೋಣಗಳ ಹಿಂಡು

- Advertisement -
- Advertisement -

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯ ಹೊಡೆತದಿಂದ ತತ್ತರಿಸಿದ್ದ ಜನರಿಗೆ ಈಗ ಕಾಡು ಪ್ರಾಣಿಗಳ ಆತಂಕ ಎದುರಾಗಿದೆ. ಮೂಡಿಗೆರೆ ತಾಲೂಕಿನ ಕೆಳಗೂರಿನಲ್ಲಿ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿವೆ. ಕೆಳಗೂರಿನ ಆಂಜನೇಯ ದೇವಸ್ಥಾನದ ಬಳಿ ಕಾಡುಕೋಣಗಳ ಹಿಂಡು ಪ್ರತ್ಯಕ್ಷವಾಗಿದೆ.

ಕಾಡುಕೋಣಗಳ ಗುಂಪನ್ನು ನೋಡಿ ಜನರಲ್ಲಿ ಆತಂಕ ಉಂಟಾಗಿದ್ದು, ಕಾಡು ಕೋಣಗಳ ಓಡಾಟವನ್ನು ಮೊಬೈಲ್ ಫೋನ್ ನಲ್ಲಿ ಸ್ಥಳೀಯರು ಸೆರೆ ಹಿಡಿದಿದ್ದಾರೆ. 20ಕ್ಕೂ ಹೆಚ್ಚು ಕಾಡು ಕೋಣಗಳನ್ನು ನೋಡಿ ದಂಗಾದ ಜನರು ಆತಂಕಕ್ಕೊಳಗಾಗಿದ್ದರು.‌

ಇಂದು ಬೆಳಗ್ಗೆ ಕಾಣಿಸಿಕೊಂಡಿದ್ದ ಹಿಂಡು ನಂತರ ಕಾಡಿಗೆ ಮರಳಿದೆ. ಆದರೆ ಮಳೆಯಿಂದಾಗಿ ತೀವ್ರ ಆತಂಕಕ್ಕೊಳಗಾಗಿದ್ದ ಕೆಳಗೂರಿನ ಜನರು ಬೆಳ್ಳಂಬೆಳಗ್ಗೆಯೇ ಕಾಡಿನ ಅತಿಥಿಗಳನ್ನು ನೋಡಿ ಕಂಗಾಲಾಗಿದ್ದರು.

- Advertisement -

Latest News

error: Content is protected !!