- Advertisement -
- Advertisement -
ಟೋಕಿಯೋ: ಟೋಕಿಯೋ ಒಲಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಪಿವಿ ಸಿಂಧು ಜಪಾನಿನ ಅಕೇನ್ ಯಮಗುಚಿ ಅವರನ್ನು ಸೋಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ಜಪಾನ್ ನ, ವಿಶ್ವ ನಂ. 4 ನೇ ಶ್ರೇಯಾಂಕಿತೆ ಯಮಗುಚಿ ವಿರುದ್ಧ 21-13, 22-20 ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಶುಕ್ರವಾರ 56 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನ ಒಂದು ಹಂತದಲ್ಲಿ ಸಿಂಧು ಎರಡು ಅಂಕಗಳ ಹಿನ್ನಡೆಯಲ್ಲಿದ್ದರು. ಆದರೆ ಅಂತಿಮ ಕ್ಷಣದಲ್ಲಿ ಒತ್ತಡ ನಿಭಾಯಿಸಲು ಯಶಸ್ವಿಯಾದ ಸಿಂಧು ಎದುರಾಳಿಗೆ ಸೆಡ್ಡು ಹೊಡೆದ, ಪರಿಣಾಮ ಸ್ಕೋರ್ 20-20 ಕ್ಕೆ ಬಂದು ನಿಂತಿತು. ಈ ಹಂತದಲ್ಲಿ ಮತ್ತೆ ಸಿಂಧು ತಮ್ಮೆಲ್ಲಾ ಅನುಭವದ ಧಾರೆಯೆರೆದು ಪಂದ್ಯವನ್ನು ತಮ್ಮದಾಗಿಸಿಕೊಂಡರು.
- Advertisement -