- Advertisement -
- Advertisement -
ಬೆಳ್ತಂಗಡಿ: ಚಾರ್ಮಾಡಿ ಘಾಟ್ ನಲ್ಲಿ ಇಂದಿನಿಂದ ರಾತ್ರಿ 7 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದರು. ಆದರೆ ಜಿಲ್ಲಾಡಳಿತದ ಏಕಾಏಕಿ ನಿರ್ಧಾರದಿಂದ ಜನ ಪರದಾಡುವಂತಾಗಿತ್ತು. ಹಾಗಾಗಿ ಇಂದು ರಾತ್ರಿ 10ರವರೆಗೆ ವಾನ ಸಂಚಾರಕ್ಕೆ ಅವಕಾಶ ನೀಡಿದ್ದಾರೆ.
ಇನ್ನು ನಾಳೆಯಿಂದ ರಾತ್ರಿ 7 ರಿಂದ ಬೆಳಗ್ಗೆ 6 ಗಂಟೆಯವರೆಗೆ ಚಾರ್ಮಾಡಿ ಘಾಟ್ ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿರಲಿದೆ. ಜಿಲ್ಲಾಡಳಿತದ ಮುಂದಿನ ಆದೇಶದವರೆಗೆ ಇದು ಹೀಗೆ ಮುಂದುವರೆಯಲಿದೆ.
- Advertisement -