Sunday, May 19, 2024
Homeಕರಾವಳಿಲೆಫ್ಟಿನೆಂಟ್ ಕರ್ನಲ್ ಆಗಿ ಸುಳ್ಯದ ಡಾ. ಕಾರ್ತಿಕ್ ಕಣಕ್ಕೂರು ಆಯ್ಕೆ

ಲೆಫ್ಟಿನೆಂಟ್ ಕರ್ನಲ್ ಆಗಿ ಸುಳ್ಯದ ಡಾ. ಕಾರ್ತಿಕ್ ಕಣಕ್ಕೂರು ಆಯ್ಕೆ

spot_img
- Advertisement -
- Advertisement -

ಸುಳ್ಯ: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿ ಸುಳ್ಯ ತಾಲೂಕಿನ ಡಾ. ಕಾರ್ತಿಕ್ ಕಣಕ್ಕೂರು ಆಗಿದ್ದಾರೆ.‌ 2010 ರ ಜುಲೈ 6ರಂದು ಕ್ಯಾಪ್ಟನ್ ಆಗಿ ಭಾರತೀಯ ಸೇನೆಯ ವೈದ್ಯಕೀಯ ದಳದಲ್ಲಿ ನಿಯೋಜನೆಗೊಂಡು ಪಣಜಿ ಮಿಲಿಟರಿ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಿದ ಕಾರ್ತಿಕ್, 2014 ಜುಲೈ 10 ರಂದು ಕಾರ್ತಿಕ್ ಮೇಜರ್ ಹುದ್ದೆಗೆ ಪದೋನ್ನತಿ ಪಡೆದರು. ಜುಲೈ 10ರಂದು ಕಾರ್ತಿಕ್ ಲೆಫ್ಟಿನೆಂಟ್ ಕರ್ನಲ್ ಆಗಿ ಪದೋನ್ನತಿ ಹೊಂದಿದ್ದಾರೆ.

ಸುಳ್ಯದ ಕಾಂತಮಂಗಲದಲ್ಲಿ ವಾಸ್ತವ್ಯವಿರುವ ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ, ಸಾಹಿತಿ ಜನಾರ್ಧನ ಕಣಕ್ಕೂರು ಹಾಗೂ ನಿವೃತ್ತ ಸರ್ಕಾರಿ ಉದ್ಯೋಗಿ ಗಿರಿಜಾ ದಂಪತಿಯ ಪುತ್ರರಾಗಿರುವ ಕಾರ್ತಿಕ್ ಸುಳ್ಯದ ರೋಟರಿ ಶಾಲೆಯಲ್ಲಿ ಪ್ರಾಥಮಿಕ, ಕೆ.ವಿ.ಜಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಅಳಿಕೆಯ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರೈಸಿದರು. ಮಂಗಳೂರಿನ ಕೆಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡಿ ಸುಳ್ಯ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ವೈದ್ಯಾಧಿಕಾರಿಯಾಗಿ ಒಂದೆರಡು ವರ್ಷ ಸೇವೆ ಸಲ್ಲಿಸಿದ್ದರು. ಕಾರ್ತಿಕ್‌ ಜೂನ್ 2020 ರಲ್ಲಿ ಪುಣೆಯ ಪ್ರತಿಷ್ಠಿತ ಸಶಸ್ತ್ರ ಸೇನೆಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಎಂ.ಡಿ. ಬಯೋಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಆಯ್ಕೆಯಾಗಿದ್ದು ಪ್ರಸ್ತುತ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!