Saturday, October 17, 2026
Homeಕರಾವಳಿಬೆಳ್ತಂಗಡಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ; ಆರೋಪಿ ವಶಕ್ಕೆ !!

ಬೆಳ್ತಂಗಡಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ; ಆರೋಪಿ ವಶಕ್ಕೆ !!

- Advertisement -
- Advertisement -

ಬೆಳ್ತಂಗಡಿ:ಬೆಳ್ತಂಗಡಿ ತಾಲೂಕಿನ ಇಳಂತಿಲ ಎಂಬಲ್ಲಿ ಅಪ್ರಾಪ್ತೆಯನ್ನು ಕಾರಿನಲ್ಲಿ ಕೂರಿಸಿ ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಕ್ಕಡ ನಿವಾಸಿ ರುಕ್ಮಯ್ಯ ಎಂದು ಗುರುತಿಸಲಾಗಿದ್ದು, ಬಾಲಕಿಯೂ ಮನೆಯಲ್ಲಿ ಒಬ್ಬಳೇ ಇದ್ದ ಸಂಧರ್ಭ ಕಾರಿನಲ್ಲಿ ಬಂದ ಆರೋಪಿಯೂ ಬಾಲಕಿಯನ್ನು ಕಾರಿನಲ್ಲಿ ಬರಬೇಕು ಎಂದು ಬಲವಂತ ಮಾಡಿದ್ದಾನೆ. ಬಾಲಕಿ ಒಪ್ಪದೇ ಇದ್ದಾಗ ಆಕೆಯನ್ನು ಬೆದರಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿ ಲೈಂಗಿಕ ಹಿಂಸೆ ನೀಡಲು ಯತ್ನಿಸಿದ್ದಾನೆ.

ಈ ವೇಳೆ ಬಾಲಕಿ ಜೋರಾಗಿ ಕಿರುಚಿದಾಗ ಜೀವ ಬೆದರಿಕೆ ಹಾಕಿ ಮನೆಗೆ ಕರೆತಂದು ಬಿಟ್ಟಿದ್ದಾನೆ. ಈ ಕುರಿತು ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನೀಡಿದ್ದು, ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಆರೋಪಿ ಕೊಕ್ಕಡ ನಿವಾಸಿ ರುಕ್ಮಯ್ಯ ಮಡಿವಾಳ ಎಂಬಾತನನ್ನು ಬಂಧಿಸಿದ್ದಾರೆ.

ಈತ ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತ ಎಂದು ತಿಳಿದುಬಂದಿದೆ. ಈತನ ಮೇಲೆ ಈ ಮೊದಲು ಕೂಡಾ ಇಂತಹ ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ

- Advertisement -

Latest News

error: Content is protected !!