Wednesday, June 3, 2026
Homeಕರಾವಳಿಮೀನು ಹಿಡಿಯುತ್ತಿದ್ದ ವೇಳೆ ಮುಳುಗಿ ಮೃತಪಟ್ಟ ಮೀನುಗಾರ

ಮೀನು ಹಿಡಿಯುತ್ತಿದ್ದ ವೇಳೆ ಮುಳುಗಿ ಮೃತಪಟ್ಟ ಮೀನುಗಾರ

- Advertisement -
- Advertisement -

ಮಂಗಳೂರು: ಮಂಗಳೂರಿನ ಅಳಿವೆ ಬಾಗಿಲಿನ ನದಿ ಸಮೀಪ ಮೀನುಗಾರರೊಬ್ಬರು ಗುರುವಾರ ಬಲೆ ಹರಡಿ ಮೀನು ಹಿಡಿಯುತ್ತಿದ್ದ ಸಂದರ್ಭ ಮುಳುಗಿ ಮೃತಪಟ್ಟಿದ್ದಾರೆ. ಜಯ ಪುತ್ರನ್(55) ತೋಟ ಬೆಂಗ್ರೆ ನಿವಾಸಿಯಾಗಿದ್ದು ಮೀನು ಹಿಡಿಯುವ ಕಾಯಕ ಮಾಡುತ್ತಿದ್ದರು. ಗುರುವಾರ ಭಾರೀ ಗಾಳಿ ಮಳೆ ಬಂದಾಗ ಆಕಸ್ಮಿಕವಾಗಿ ಬಲೆ ಕೈ ಕಾಲಿಗೆ ಸಿಲುಕಿ ಈಜಲಾಗದೆ ಮುಳುಗಿ ಮೃತಪಟ್ಟಿದ್ದಾರೆ. ಜಯ ಪುತ್ರನ್ ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಹುಡುಕಾಟ ನಡೆಸಿದ ವೇಳೆ ಮೃತದೇಹ ಕಸಬ ಬೆಂಗ್ರೆ ಬಳಿ ಪತ್ತೆಯಾಯಿತು.

ಮೃತ ಜಯ ಪುತ್ರನ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದು ಕುಟುಂಬಕ್ಕೆ ಇವರೇ ಜೀವನಾಧಾರವಾಗಿದ್ದರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!