Monday, June 15, 2026
Homeಅಪರಾಧಮಂಗಳೂರಿನಲ್ಲಿ ಯೂನಿಸೆಕ್ಸ್ ಸಲೂನ್ ಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ: ಆರೋಪಿಗೆ ನ್ಯಾಯಾಂಗ ಬಂಧನ

ಮಂಗಳೂರಿನಲ್ಲಿ ಯೂನಿಸೆಕ್ಸ್ ಸಲೂನ್ ಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ: ಆರೋಪಿಗೆ ನ್ಯಾಯಾಂಗ ಬಂಧನ

- Advertisement -
- Advertisement -

ಮಂಗಳೂರು: ಯೂನಿಸೆಕ್ಸ್ ಸಲೂನ್ ಗೆ ನುಗ್ಗಿ ಮಹಿಳೆಯನ್ನು ಎಳೆದಾಡಿ ಕಿರುಕುಳ ನೀಡಿರುವ ಘಟನೆ ಮಂಗಳೂರಿನ ಕದ್ರಿಯ ಸಲೂನ್ ಒಂದರಲ್ಲಿ ನಡೆದಿದೆ.‌ ಜುಲೈ 1 ರಂದು ಘಟನೆ ನಡೆದಿದ್ದು, ಕಿರುಕುಳ ನೀಡಿ 14 ಸಾವಿರ ರೂಪಾಯಿ ಹಣ ಕೂಡ ದರೋಡೆ‌ ಮಾಡಲಾಗಿದೆ.

ಆರೋಪಿ ಮಂಗಳೂರಿನ ಅತ್ತಾವರ ನಿವಾಸಿ ಅಬ್ದುಲ್ ದಾವೂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.‌ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕದ್ರಿಯಲ್ಲಿರುವ ಬ್ಲಿಸ್ ಸಿಗ್ನೇಚರ್ ಯೂನಿಸೆಕ್ಸ್ ಸೆಲೂನ್ ನಲ್ಲಿ ಜುಲೈ 1 ರಂದು ಘಟನೆ ನಡೆದಿದೆ.

ಮಹಿಳೆಯನ್ನು ಎಳೆದಾಡಿ ಹಲ್ಲೆ ನಡೆಸಿದ್ದ ದಾವೂದ್, 14 ಸಾವಿರ ರೂಪಾಯಿ ದರೋಡೆ ನಡೆಸಿ ಪರಾರಿಯಾಗಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯನ್ನು ಪೊಲೀಸರು ಕೋರ್ಟ್‌ ಗೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

- Advertisement -

Latest News

error: Content is protected !!