- Advertisement -
- Advertisement -
ಮಂಗಳೂರು: ಮಂಗಳೂರು ವಿಭಾಗದ ಡಿಸಿಎಫ್ ಆಗಿದ್ದ ಐಎಫ್ಎಸ್ ಅಧಿಕಾರಿ ಡಾ. ವಿ. ಕರಿಕಾಳನ್ ವರ್ಗಾವಣೆಗೊಂಡಿದ್ದಾರೆ. ಬೆಂಗಳೂರಿನ ಕಾಡುಗೋಡಿಯ ಎಫ್ ಟಿಎಟಿಐ ಡಿಸಿಎಫ್ ಆಗಿ ಕರಿಕಾಳನ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಇಂದು ನಾಲ್ವರು ಐಎಫ್ ಎಸ್ ಅಧಿಕಾರಿಗಳು ಮತ್ತು ಇಬ್ಬರು ಎಸ್ ಎಫ್ ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಕರಿಕಾಳನ್ ವರ್ಗಾವಣೆಯಿಂದ ತೆರವಾಗಿರುವ ಮಂಗಳೂರು ವಿಭಾಗದ ಡಿಸಿಎಫ್ ಹುದ್ದೆಗೆ ಇನ್ನಷ್ಟೇ ಸರ್ಕಾರ ನೇಮಕಾತಿ ಮಾಡಬೇಕಿದೆ.
- Advertisement -