Tuesday, July 1, 2025
Homeಆರಾಧನಾಶ್ರೀ ಹರಿಪಾದ ಧರ್ಮದೈವ ಜಾರಂದಾಯ ಯುವಕ ಮಂಡಲ ಮತ್ತು ಮಹಿಳಾ ಮಂಡಲ : ಕಿಟ್...

ಶ್ರೀ ಹರಿಪಾದ ಧರ್ಮದೈವ ಜಾರಂದಾಯ ಯುವಕ ಮಂಡಲ ಮತ್ತು ಮಹಿಳಾ ಮಂಡಲ : ಕಿಟ್ ವಿತರಣೆ

spot_img
- Advertisement -
- Advertisement -

ಮಂಗಳೂರು : ದೇಶದೆಲ್ಲೆಡೆ ಕೊರೊನ ಎಂಬ ಸಾಂಕ್ರಾಮಿಕ ರೋಗದ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ, ಸಾಂಕ್ರಾಮಿಕ ರೋಗ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಸರಕಾರ ಲಾಕ್ ಡೌನ್ ಘೋಷಿಸಿದ್ದು, ತತ್ಪರಿಣಾಮವಾಗಿ ದಿನಗೂಲಿ ನೌಕರರು ಹಾಗೂ ಇತರೆ ಕಾರ್ಮಿಕ ಕುಟುಂಬಗಳು ತೀರಾ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿವೆ . ಆರ್ಥಿಕವಾಗಿ ತೀರಾ ಸಂಕಷ್ಟದಲ್ಲಿರುವ ಅರ್ಹ 70 ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ವಿತರಿಸುವ ಕಾರ್ಯಕ್ರಮ ಮಂಗಳೂರು ತಾಲೂಕಿನ ಪಂಜ ಶ್ರೀ ಹರಿಪಾದ ಧರ್ಮದೈವ ಜಾರಂದಾಯ ಯುವಕ ಮಂಡಲ ಮತ್ತು ಮಹಿಳಾ ಮಂಡಲ ಸಂಘದ ವತಿಯಿಂದ ನಡೆಯಿತು.


ಕಾರ್ಯಕ್ರಮದಲ್ಲಿ ನಲ್ಯಗುತ್ತು ಆಶ್ವಿನ್ ಶೇಕ ಕುಡುಂಬೂರು ,ಪಂಜ ವಾಸುದೇವ ಭಟ್ , ಕೆ ನಾರಾಯಣ ಪೂಜಾರಿ ಭಂಡಾರದ ಮನೆ ,ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾಕ್ರಷ್ಣಪ್ಪ. ಸುರೇಶ್ ಪಂಜ ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!