- Advertisement -
![]()
- Advertisement -
ಹಾಸನ: ಸ್ನೇಹಿತರೊಂದಿಗೆ ಬೇಟೆಗೆ ತೆರಳಿದ ಯುವಕನೊಬ್ಬ ಗುಂಡೇಟಿಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಲಹಳ್ಳಿ ಫಾರೆಸ್ಟ್ ನಲ್ಲಿ ನಡೆದಿದೆ. ಬೇಲೂರು ತಾಲೂಕಿನ ಮಧು (24) ಮೃತ ಯುವಕ. ಈತ ನಿನ್ನೆ ಸಂಜೆ ತನ್ನ ಸ್ನೇಹಿತರ ಜೊತೆಗೆ ತೆರಳಿದ್ದು,ಗುಂಡೇಟಿಗೆ ಬಲಿಯಾಗಿದ್ದಾನೆ.
ಇನ್ನು ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಧುವನ್ನು ಕೂಡಲೇ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಸ್ನೇಹಿತರು ಎಸ್ಕೇಪ್ ಆಗಿದ್ದಾರೆ. ಇತ್ತ ಚಿಕಿತ್ಸೆ ಫಲಿಕಾರಿಯಾಗದೆ ಮೃತಪಟ್ಟಿರುವ ಮಧು ಸಾವನ್ನಪ್ಪಿದ್ದಾನೆ.
ಸಾವಿನ ಬಗ್ಗೆ ಹಲವು ಅನುಮಾನಗಳು ಎದ್ದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗಿಳಿದಿದ್ದಾರೆ. ಅರಣ್ಯಕ್ಕೆ ಬೇಟೆಗೆ ತೆರಳಿದಾಗ ಮಿಸ್ ಫೈರ್ ಆಗಿದೆಯಾ ಅಥವಾ ಕೊಲೆಯಾ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


