Wednesday, June 3, 2026
Homeಕರಾವಳಿಪುತ್ತೂರಿನಲ್ಲಿ ಗಾಂಧಿ ಪ್ರತಿಮೆಗೆ ಅಪಮಾನ

ಪುತ್ತೂರಿನಲ್ಲಿ ಗಾಂಧಿ ಪ್ರತಿಮೆಗೆ ಅಪಮಾನ

- Advertisement -
- Advertisement -

ಪುತ್ತೂರು: ಪುತ್ತೂರಿನ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಲ್ಲಿರುವ ಗಾಂಧಿ ಪ್ರತಿಮೆಗೆ ಅವಮಾನ ಮಾಡಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.

ನಿನ್ನೆ ತಡರಾತ್ರಿ ಯಾರೋ ಕಿಡಿಗೇಡಿಗಳು ಗಾಂಧಿ ಪ್ರತಿಮೆಯ ಕನ್ನಡಕ ತೆಗೆದು ಪ್ರತಿಮೆಯ ತಲೆಯ ಮೇಲೆ ಇರಿಸಿ, ಪ್ರತಿಮೆಯ ತಲೆಗೆ ಟೀ ಶರ್ಟ್‌ ಇಟ್ಟು ಗಾಂಧೀಜಿಯನ್ನು ಅಪಮಾನಿಸಿದ್ದಾರೆ. . ಘಟನೆಗೆ ಸಂಬಂಧಿಸಿದಂತೆ ಪುತ್ತೂರಿನ ಗಾಂಧಿಕಟ್ಟೆ ಸಮಿತಿಯವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ,

ಘಟನೆಯ ಬಗ್ಗೆ ಮಾಹಿತಿ ಪಡೆದ ಪುತ್ತೂರು ಡಿ.ವೈ.ಎಸ್‌.ಪಿ. ಡಾ. ಗಾನ ಪಿ ಕುಮಾರ್‌ ಮತ್ತು ಪುತ್ತೂರು ನಗರ ಠಾಣೆಯ ಸರ್ಕಲ್‌ ಇನ್ಸ್ ಪೆಕ್ಟರ್‌ ಗೋಪಾಲ್‌ ನಾಯ್ಕ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!