Saturday, June 6, 2026
Homeತಾಜಾ ಸುದ್ದಿನಡು ರಸ್ತೆಯಲ್ಲಿ ಡೀಸೆಲ್ ಲಾರಿ ಪಲ್ಟಿ : ಪಾತ್ರೆ, ಬಕೆಟ್ ಗಳಲ್ಲಿ ಡೀಸೆಲ್ ತುಂಬಿ ತೊಳ್ಳೋದಕ್ಕೆ...

ನಡು ರಸ್ತೆಯಲ್ಲಿ ಡೀಸೆಲ್ ಲಾರಿ ಪಲ್ಟಿ : ಪಾತ್ರೆ, ಬಕೆಟ್ ಗಳಲ್ಲಿ ಡೀಸೆಲ್ ತುಂಬಿ ತೊಳ್ಳೋದಕ್ಕೆ ಮುಗಿ ಬಿದ್ದ ಜನ

- Advertisement -
- Advertisement -

ದಾವಣಗೆರೆ : ಡೀಸೆಲ್ ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ.

ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಡೀಸೆಲ್ ತುಂಬಿದ ಲಾರಿ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನೂ ಲಾರಿಯಿಂದ ಡೀಸೆಲ್ ಸೋರಿಕೆಯಾಗುತ್ತಲೇ ಮುಗಿಬಿದ್ದ ಜನರು ಪಾತ್ರೆ, ಬಕೆಟ್ ತೆಗೆದುಕೊಂಡು ಬಂದು ಡೀಸೆಲ್ ತುಂಬಿಸಿಕೊಂಡು ಹೋಗಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಜನರನ್ನು ಚದುರಿಸಿದ್ದಾರೆ.

- Advertisement -

Latest News

error: Content is protected !!