Tuesday, July 1, 2025
Homeಕರಾವಳಿಮಂಗಳೂರು: ಸಮುದ್ರಕ್ಕೆ ಬಿದ್ದಿದ್ದ ಲಾರಿ ಮೇಲೆಕ್ಕೆ, ನಾಪತ್ತೆಯಾಗಿದ್ದ ಕಂಡೆಕ್ಟರ್ ಶವ ಕೂಡ ಪತ್ತೆ

ಮಂಗಳೂರು: ಸಮುದ್ರಕ್ಕೆ ಬಿದ್ದಿದ್ದ ಲಾರಿ ಮೇಲೆಕ್ಕೆ, ನಾಪತ್ತೆಯಾಗಿದ್ದ ಕಂಡೆಕ್ಟರ್ ಶವ ಕೂಡ ಪತ್ತೆ

spot_img
- Advertisement -
- Advertisement -

ಮಂಗಳೂರು: ನವಮಂಗಳೂರು ಬಂದರ್ ನಲ್ಲಿ ಕಲ್ಲಿದ್ದಲು ಸಾಗಾಟದ ಲಾರಿಯೊಂದು ನಿಯಂತ್ರಣ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಹಾಗೂ ಕ್ಲೀನರ್​ ಮೃತದೇಹ ಪತ್ತೆಯಾಗಿದೆ. ವಾಹನ ನಿರ್ವಾಹಕ ಭೀಮಪ್ಪ(22) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಡೆಲ್ಟಾ ಕಂಪನಿಯ 10 ಚಕ್ರದ ಬಾಡಿ ಲಿಫ್ಟ್ ನ ಲಾರಿಯೊಂದು ಎನ್ಎಂಪಿಟಿಯ 14ನೇ ಬರ್ತ್​ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ ಸಿಐಎಸ್ಎಫ್ ನ ಸಿಬ್ಬಂದಿಗಳು ಲಾರಿಯ ಚಾಲಕನ ಮೃತದೇಹ ಹೊರತೆಗೆದಿದ್ದರು. ಆತನನ್ನು ಬಾಗಲಕೋಟೆ ಮೂಲದ ರಾಜೇಸಾಬ್ (26) ಎಂದು ಗುರುತಿಸಲಾಗಿತ್ತು.

ಟ್ರಕ್​​ನಲ್ಲಿ ಕಂಡೆಕ್ಟರ್ ಆಗಿದ್ದ ಭೀಮಪ್ಪ ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರೆದಿತ್ತು. ಇಂದು ವಾಹನವನ್ನು ಹೊರತೆಗೆಯಲಾಗಿದ್ದು, ಭೀಮಪ್ಪನ ಮೃತದೇಹವನ್ನೂ ಹೊರತೆಗೆಯಲಾಗಿದೆ. ಭೀಮಪ್ಪ ಕೂಡ ಬಾಗಲಕೋಟೆ ಜಿಲ್ಲೆಯ ಮೂಲದವನಾಗಿದ್ದಾನೆ. ಪಣಂಬೂರು ಪೋಲಿಸ್ ಠಾಣೆಯಲ್ಲಿ‌ ಘಟನೆಯ ಕುರಿತಂತೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!