Thursday, September 10, 2026
Homeಕರಾವಳಿಮಂಗಳೂರು: ತಂದೆಯಿಂದಲೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯಾ ಯತ್ನ

ಮಂಗಳೂರು: ತಂದೆಯಿಂದಲೇ ಮಗನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯಾ ಯತ್ನ

- Advertisement -
- Advertisement -

ಮಂಗಳೂರು: ಪುತ್ರನಿಗೆ ತಂದೆಯೇ ಪೆಟ್ರೋಲ್ ಸುರಿದು ಹತ್ಯೆಗೆ ಯತ್ನಿಸಿರುವ ಘಟನೆ ಜೆಪ್ಪಿನಮೊಗರು ತಾರ್ದೊಲ್ಯ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದ್ದು, ಗಂಭೀರ ಸ್ಥಿತಿಯಲ್ಲಿರುವ ಪುತ್ರನನ್ನು ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ತಂದೆಯನ್ನು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶರ್ಮಿತ್ (25) ಹತ್ಯಾ ಯತ್ನಕ್ಕೆ ಒಳಗಾದ ಯುವಕ. ತಂದೆ ವಿಶ್ವನಾಥ ಶೆಟ್ಟಿ ಯಾನೆ ತಿಪ್ಪಿ ಪುತ್ರನನ್ನೇ ಹತ್ಯೆಗೆ ಯತ್ನಿಸಿದಾತ.

ನಿನ್ನೆ ಸಂಜೆ ಮನೆಯಲ್ಲಿ ತಂದೆ ಮತ್ತು ಮಗನ ನಡುವೆ ಜಗಳ ನಡೆದಿತ್ತು. ಇದೇ ದ್ವೇಷದಿಂದ ಮನೆಯ ಕೋಣೆಯೊಳಗೆ ಮಲಗಿದ್ದ ಪುತ್ರನ ಮೇಲೆ ಪೆಟ್ರೋಲ್ ಸುರಿದ ವಿಶ್ವನಾಥ ಶೆಟ್ಟಿ ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ಶರ್ಮಿತ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿಶ್ವನಾಥ ನನ್ನು ಬಂಧಿಸಲಾಗಿದೆ. ತಂದೆ ಹಾಗೂ ಮಗ ಇಬ್ಬರೂ ಹೈನುಗಾರಿಕೆ ನಡೆಸುತ್ತಿದ್ದರು.

- Advertisement -

Latest News

error: Content is protected !!