Wednesday, June 3, 2026
Homeತಾಜಾ ಸುದ್ದಿಇಬ್ಬರನ್ನು ಪ್ರೀತಿಸಿ ಇಬ್ಬರನ್ನೂ ಒಟ್ಟಿಗೆ ವಿವಾಹವಾದ ಯುವಕ

ಇಬ್ಬರನ್ನು ಪ್ರೀತಿಸಿ ಇಬ್ಬರನ್ನೂ ಒಟ್ಟಿಗೆ ವಿವಾಹವಾದ ಯುವಕ

- Advertisement -
- Advertisement -

ಹೈದರಾಬಾದ್: ಇತ್ತೀಚೆಗೆ ಕೋಲಾರದಲ್ಲಿ ವ್ಯಕ್ತಿಯೊಬ್ಬ ಅಕ್ಕ ತಂಗಿಯರನ್ನು ಒಟ್ಟಿಗೆ ವಿವಾಹವಾಗಿ ಸುದ್ದಿಯಾಗಿದ್ದ. ಇದೀಗ ಅದಕ್ಕಿಂತ ವಿಭಿನ್ನವಾದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.


ಹೈದರಾಬಾದ್ ನ  ಅರ್ಜುನ್‌  , ತೆಲಂಗಾಣದ ಅದಿಲಾಬಾದ್ ಜಿಲ್ಲಾ ಉಟ್ನೂರು ಮಂಡಲಂ ಮನ್ಸೂರ್ ನ ನಿವಾಸಿಗಳಾದ  ಸುರೇಖಾ ಹಾಗೂ ಉಷಾರಾಣಿ ಈ ಮೂವರೂ ಸಂಬಂಧಿಕರು. ಅರ್ಜುನ್‌ನನ್ನು ಕಂಡರೆ ಇಬ್ಬರಿಗೂ ತುಂಬಾ ಇಷ್ಟ. ಅವರಿಬ್ಬರನ್ನೂ ಕಂಡರೆ ಮೊದಲಿನಿಂದಲೂ ಇವನಿಗೂ ಇಷ್ಟ. ಇಬ್ಬರನ್ನೂ ಒಟ್ಟಿಗೇ ಪ್ರೀತಿಸುತ್ತಿದ್ದ ಅರ್ಜುನ್‌ ​ ಕೊನೆಗೆ ಇಬ್ಬರನ್ನೂ ಮದುವೆಯಾಗಿದ್ದಾನೆ.

ವಿಚಿತ್ರ ಎಂದರೆ ಇಬ್ಬರಿಗೂ ಅರ್ಜುನ್ ತಮ್ಮಿಬ್ಬರನ್ನೂ ಪ್ರೀತಿಸುತ್ತಿದ್ದಾನೆ ಎಂದು ಗೊತ್ತಿದ್ದರೂ  ಇಬ್ಬರೂ ಅವನೇ  ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.ಮನೆಯಲ್ಲಿ ಎಲ್ಲರೂ ವಿರೋಧಿಸಿದ್ದರು. ವಿಷಯ ತಿಳಿದ ಕುಟುಂಬಸ್ಥರೂ ವಿರೋಧಿಸಿದ್ದರು. ಆದರೆ ಇದ್ಯಾವುದನ್ನೂ ಕೇರ್ ಮಾಡದ ಯುವತಿಯರಿಬ್ಬರು ಒಟ್ಟಿಗೆ ಅರ್ಜುನ್ ನನ್ನು ವರಿಸಿದ್ದಾರೆ.

ಇನ್ನು ಅರ್ಜುನ್ ಪದವೀಧರ. ಯುವತಿಯರು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಇದೀಗ ಒಟ್ಟಿಗೆ ಆತನನ್ನು ಮದುವೆಯಾಗಿ ಅವನ ಮನೆ ಸೇರಿದ್ದಾರೆ.

- Advertisement -

Latest News

error: Content is protected !!