Friday, June 5, 2026
Homeಕರಾವಳಿಉಡುಪಿಗ್ರಾಮ ಪಂಚಾಯಿತಿ ಅಧ್ಯಕ್ಷನ ಕಾರ್ಯವೈಖರಿ ಪ್ರಶ್ನಿಸಿದಾತ ಸಂಶಯಾಸ್ಪದವಾಗಿ ಸಾವು: ಅಧ್ಯಕ್ಷನ ವಿರುದ್ಧ ಕೊಲೆ ಆರೋಪ

ಗ್ರಾಮ ಪಂಚಾಯಿತಿ ಅಧ್ಯಕ್ಷನ ಕಾರ್ಯವೈಖರಿ ಪ್ರಶ್ನಿಸಿದಾತ ಸಂಶಯಾಸ್ಪದವಾಗಿ ಸಾವು: ಅಧ್ಯಕ್ಷನ ವಿರುದ್ಧ ಕೊಲೆ ಆರೋಪ

- Advertisement -
- Advertisement -

ಕುಂದಾಪುರ: ತಾಲೂಕು ವ್ಯಾಪ್ತಿಯ ಯಡಮೊಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷನೇ ಗ್ರಾಮಸ್ಥ ನನ್ನು ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಯಡಮೊಗೆಯ ಗ್ರಾಮಸ್ಥ ಉದಯ ಗಾಣಿಗ ಅವರನ್ನು ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಮೂರು ದಿನಗಳ ಹಿಂದೆ ಗ್ರಾಮ ಪಂಚಾಯತ್ ಲಾಕ್ಡೌನ್ ಬಗ್ಗೆ  ಕೊಲೆಯಾದ ಉದಯ ಗಾಣಿಗ ಸ್ಟೇಟಸ್ ಹಾಕಿದ್ದರು. ಗ್ರಾಮಸ್ಥರಿಗೆ ಪೂರಕ ವ್ಯವಸ್ಥೆ ಕಲ್ಪಿಸಿ ಊರಿಗೆ ಬೇಲಿ ಹಾಕಿ ಪೋಸು ಕೊಡಬೇಡಿ.ಕೊರೋನಾ ಪೀಡಿತ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿ ಆಮೇಲೆ ಪ್ರಚಾರ ತಗೊಳ್ಳಿ.ಸರಕಾರದ ಸಹಾಯ ಧನ ನುಂಗಬೇಡಿ ಎಂದು ಉದಯ ಗಾಣಿಗ ಸ್ಟೇಟಸ್ ಹಾಕಿದ್ದರು.

ಕೊಲೆಯಾದ ಉದಯ್ ಗಾಣಿಗ…..

ಇದೆಲ್ಲಾ ಆದ ಬಳಿಕ ನಿನ್ನೆ ಸಂಜೆ ರಸ್ತೆಯಲ್ಲಿ ನಿಂತಿದ್ದ ಉದಯ ಗಾಣಿಗ ಅವರಿಗೆ ಪ್ರಾಣೇಶ್ ಯಡಿಯಾಳ್ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾಗುತ್ತಿದ್ದಂತೆ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಕಾರು ಬಿಟ್ಟು ಓಡಿ ಹೋಗಿದ್ದಾರೆ. ಕೂಡಲೇ ಸಾರ್ವಜನಿಕರು 108 ಅಂಬ್ಯುಲೆನ್ಸ್ ಮೂಲಕ  ಉದಯ್ ಗಾಣಿಗ ಅವರನ್ನು ಆಸ್ಪತ್ರೆ ಗೆ ಕೊಂಡೊಯ್ದಿದ್ದಾರೆ. ಈ ವೇಳೆ  ಮಾರ್ಗ ಮಧ್ಯೆ ಉದಯ ಗಾಣಿಗ ಸಾವನ್ನಪ್ಪಿದ್ದಾರೆ. ಇದೀಗ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ್ ಉದಯ್ ಗಾಣಿಗ ಅವರನ್ನು ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

- Advertisement -

Latest News

error: Content is protected !!