Thursday, June 4, 2026
Homeಕರಾವಳಿಸುಳ್ಯ ಮೋಹನ್ ಜ್ಯುವೆಲ್ಲರಿಯಲ್ಲಿ ಕಳ್ಳತನ ಪ್ರಕರಣ: ಕಳ್ಳನ ಹೊಟ್ಟೆಯಲ್ಲಿತ್ತು ಉಂಗುರ, ಕಿವಿಯೋಲೆ ಸೇರಿದಂತೆ 35 ಗ್ರಾಂ...

ಸುಳ್ಯ ಮೋಹನ್ ಜ್ಯುವೆಲ್ಲರಿಯಲ್ಲಿ ಕಳ್ಳತನ ಪ್ರಕರಣ: ಕಳ್ಳನ ಹೊಟ್ಟೆಯಲ್ಲಿತ್ತು ಉಂಗುರ, ಕಿವಿಯೋಲೆ ಸೇರಿದಂತೆ 35 ಗ್ರಾಂ ಚಿನ್ನ

- Advertisement -
- Advertisement -

ಸುಳ್ಯ: ಇಲ್ಲಿನ ಮೋಹನ್ ಜುವೆಲ್ಲರಿ ಮಾರ್ಟ್ ನಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ಆರೋಪಿಯ ಹೊಟ್ಟೆಯಲ್ಲಿ 35 ಗ್ರಾಂ ಚಿನ್ನ ಪತ್ತೆಯಾಗಿದೆ.

ಸುಳ್ಯ ಮತ್ತು ಪುತ್ತೂರಿನಲ್ಲಿ ಚಿನ್ನ ಕಳವು ಪ್ರಕರಣವನ್ನು ಭೇದಿಸಿರುವ ಸುಳ್ಯ ಪೊಲೀಸರು ತಂಗಚ್ಚನ್ ಮತ್ತು ಶಿಬು ಎಂಬವರನ್ನು ಬಂಧಿಸಿದ್ದರು. ಇದರಲ್ಲಿ ಶಿಬು ಎಂಬಾತನಿಗೆ ಮೇ.29ರಂದು ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಎಕ್ಸರೇ ತೆಗೆದಾಗ ಆತನ ಹೊಟ್ಟೆಯಲ್ಲಿ ಚಿನ್ನಾಭರಣ ಇರುವುದು ಕಂಡು ಬಂದಿತ್ತು.

ಇಂದು ಬೆಳಿಗ್ಗೆ ವೈದ್ಯರುಗಳು ಆಪರೇಷನ್ ನಡೆಸಿ ಆರೋಪಿಯ ಹೊಟ್ಟೆಯಿಂದ 35 ಗ್ರಾಂ ಚಿನ್ನಾಭರಣಗಳನ್ನು ಹೊರ ತೆಗೆದಿದ್ದಾರೆ. ಉಂಗುರ, ಓಲೆ, ಸೇರಿದಂತೆ 30 ಕ್ಕೂ ಅಧಿಕ ಆಭರಣಗಳನ್ನು ಹೊರ ತೆಗೆದಿದ್ದಾರೆ.

ಕದ್ದ ಚಿನ್ನವನ್ನು ಆತ ನುಂಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿದಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Latest News

error: Content is protected !!