Thursday, June 4, 2026
Homeತಾಜಾ ಸುದ್ದಿಕಾಲಿನಲ್ಲಿ 9 ಬೆರಳುಗಳುಳ್ಳ ಅಪರೂಪದ ಮಗು ಜನನ

ಕಾಲಿನಲ್ಲಿ 9 ಬೆರಳುಗಳುಳ್ಳ ಅಪರೂಪದ ಮಗು ಜನನ

- Advertisement -
- Advertisement -

ವಿಜಯನಗರ: ಇಲ್ಲಿನ ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಕಾಲಿನಲ್ಲಿ 9 ಬೆರಳುಳ್ಳ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿ ಅಚ್ಚರಿ‌ ಮೂಡಿಸಿದ್ದಾರೆ.

ಮಹಿಳೆಗೆ ಮನೆಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ ಕೆಲ‌ ಸಮಯದವರೆಗೂ ನೋಡಿದ್ದಾರೆ. ಆದರೆ, ಹೆರಿಗೆಯಾಗುವುದಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹೊಸಪೇಟೆ ನಗರದ ಖಾಸಗಿ ಆಸ್ಪತ್ರೆ ದಾಖಲಿಸಿದ್ದಾರೆ.

ವೈದ್ಯರು ಸಿಜರೀನ್ ಮಾಡುವ ಮೂಲಕ ಹೆರಿಗೆಯನ್ನು ಮಾಡಿಸಿದ್ದು, ಗಂಡು ಮಗುವಿನ ಎಡಗಾಲಿಗೆ ಒಂಬತ್ತು (9) ಬೆರಳುಗಳಿವೆ. ಆದರೆ, ಬಲಗಾಲಿಗೆ ಐದು ಬೆರಳುಗಳಿವೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ತಾಯಿ ಹೊಸಪೇಟೆ ತಾಲೂಕಿನ‌ ನಿವಾಸಿಗಳಾಗಿದ್ದಾರೆ. ಆದರೆ, ತಾಯಿಯ ಹೆಸರು ಹಾಗೂ ವಿಳಾಸವನ್ನು ಬಹಿರಂಗಪಡಿಸಲು ಕುಟುಂಬಸ್ಥರು ಒಪ್ಪಿಲ್ಲ.

ಗರ್ಭಿಣಿಯಾಗಿದ್ದಾಗ ಸ್ಕ್ಯಾನ್ ಮಾಡಿದಾಗ ಹೃದಯ ಬಡಿತ, ತಲೆ ಭಾಗ, ಕೈ ಕಾಲುಗಳ ಬೆಳವಣಿಗೆ ಬಗ್ಗೆ ಕಾಣಿಸುತ್ತವೆ. ಆದರೆ ಬೆರಳುಗಳ ಬಗ್ಗೆ ಕಾಣುವುದಿಲ್ಲ, ಜನನವಾದ ಬಳಿಕ ಗೊತ್ತಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಜಗತ್ತಿನಲ್ಲಿ 9 ಬೆರಳುಗಳುಳ್ಳ ಮಕ್ಕಳಲ್ಲಿ ಇದು 20ನೇ ಕೇಸ್, ಒಂಬತ್ತು ಬೆರಳುಳ್ಳ ಮಗು ಜನನವಾಗುವುದು ತೀರಾ ವಿರಳ ಎಂದು ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!