Saturday, June 6, 2026
Homeಕರಾವಳಿಸುಳ್ಯದಲ್ಲೊಬ್ಬಳು ನಿಷ್ಕರುಣಿ ಸೊಸೆ : ಅತ್ತೆಗೆ ಮೆಣಸಿನ ಪುಡಿ ಬೆರೆಸಿದ ಬಿಸಿನೀರು ಎರಚಿದ ಮಹಿಳೆ

ಸುಳ್ಯದಲ್ಲೊಬ್ಬಳು ನಿಷ್ಕರುಣಿ ಸೊಸೆ : ಅತ್ತೆಗೆ ಮೆಣಸಿನ ಪುಡಿ ಬೆರೆಸಿದ ಬಿಸಿನೀರು ಎರಚಿದ ಮಹಿಳೆ

- Advertisement -
- Advertisement -

ಸುಳ್ಯ: ಅತ್ತೆ ಸೊಸೆ ಮಧ್ಯೆ ಮನಸ್ತಾಪಗಳು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಅತ್ತೆ ಸೊಸೆ ಮಧ್ಯೆ ಜಗಳ, ಅಸಮಾಧಾನ ಇದ್ದದ್ದೇ. ಅತ್ತೆ, ಸೊಸೆ ಚೆನ್ನಾಗಿ ಇರುವವರ ಸಂಖ್ಯೆ ಕೆಲವೇ ಕೆಲವಷ್ಟೇ. ಆದ್ರೆ ಸುಳ್ಯದಲ್ಲಿ ಅತ್ತೆ ಸೊಸೆ ನಡುವಿನ ಜಗಳವೊಂದು ತೀರಾ ವಿಪರೀತ ಹಂತಕ್ಕೆ ತಲುಪಿದೆ.

ಸುಳ್ಯದ ಪೈಚಾರಿನಲ್ಲಿ ಸೊಸೆಯೊಬ್ಬಳು ಅತ್ತೆಗೆ ಮೆಣಸಿನ ಪುಡಿ ಮಿಶ್ರಿತ ಬಿಸಿ ನೀರು ಎರಚಿದ ಅಮಾನವೀಯ ಘಟನೆ ನಡೆದಿದೆ.  ಪೈಚಾರು ನಿವಾಸಿ  ಇಸ್ಮಾಯಿಲ್ ಎಂಬವರ ಪತ್ನಿ ಮೈಮುನ ತನ್ನ ಅತ್ತೆಗೆ ಮೆಣಸಿನ ಪುಡಿ ಮಿಶ್ರಿತ ಬಿಸಿ ನೀರು ಎರಚಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

ಇಸ್ಮಾಯಿಲ್ ಮತ್ತು ಅಬ್ದುಲ್ಲಾ ಎಂಬವರು ಸಹೋದರರಾಗಿದ್ದು, ಪೈಚಾರಿನಲ್ಲಿ ಅಕ್ಕಪಕ್ಕದ ಮನೆಯಲ್ಲಿ ವಾಸವಿದ್ದಾರೆ. ಅಣ್ಣ ತಮ್ಮಂದಿರ ಮಧ್ಯೆ ಜಾಗದ ವಿಚಾರಕ್ಕೆ ಆಗಾಗ್ಗೆ ಜಗಳವಾಗುತ್ತಿತ್ತು. ಇಸ್ಮಾಯಿಲ್ ಅವರ ತಾಯಿ ಅಬ್ದುಲ್ಲಾ ಅವರ ಮಕ್ಕಳಿಗೆ ಮಾವಿನ ಹಣ್ಣು ಕೊಯ್ದು ಕೊಟ್ಟರು ಅನ್ನೋ ಕ್ಷುಲ್ಲಕ ಕಾರಣಕ್ಕೆ  ಮೈಮುನ ಅತ್ತೆಗೆ ಮೆಣಸಿನ ಪುಡಿ ಮಿಶ್ರಿತ ಬಿಸಿ ನೀರು ಎರಚಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ.

- Advertisement -

Latest News

error: Content is protected !!