Saturday, June 6, 2026
Homeಕರಾವಳಿಮಂಗಳೂರು: ನದಿಯಲ್ಲಿ ಮುಳುಗಿ 17 ವರ್ಷದ ಬಾಲಕ ಸಾವು

ಮಂಗಳೂರು: ನದಿಯಲ್ಲಿ ಮುಳುಗಿ 17 ವರ್ಷದ ಬಾಲಕ ಸಾವು

- Advertisement -
- Advertisement -

ಮಂಗಳೂರು: ನಗರದ ಹೊರವಲಯದ ಮಲ್ಲೂರು ಸಮೀಪದ ಉದ್ದಬೆಟ್ಟು ಎಂಬಲ್ಲಿ ಫಲ್ಗುಣಿ ನದಿಯಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಮೃತ ಬಾಲಕನನ್ನು ಉದ್ದಬೆಟ್ಟುವಿನ ಅಬ್ದುಲ್ ಖಾದರ್‌ ಎಂಬವರ ಪುತ್ರ ಮನ್ಸೂರ್ (17) ಎಂದು ಗುರುತಿಸಲಾಗಿದೆ.

ಗೆಳೆಯರ ಜೊತೆಗೂಡಿ ನದಿ ಸಮೀಪ ಆಟವಾಡುತ್ತಿದ್ದ ಈತ ಈಜಲು ನದಿಗೆ ಇಳಿದಿದ್ದ ಎನ್ನಲಾಗಿದ್ದು, ಈ ಸಂದರ್ಭ ನದಿಯ ಸುಳಿಗೆ ಸಿಲುಕಿ ನೀರಲ್ಲಿ ಮುಳುಗಿದ್ದು, ತಕ್ಷಣ ಅಲ್ಲೇ ಇದ್ದ ಇತರರು ನದಿಗೆ ಹಾರಿ ಮನ್ಸೂರ್‌ನನ್ನು ರಕ್ಷಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಪೊಲೀಸರು ತೆರಳಿ , ತನಿಖೆ ನಡೆಸಿದ್ದಾರೆ.

- Advertisement -

Latest News

error: Content is protected !!