Thursday, June 4, 2026
Homeತಾಜಾ ಸುದ್ದಿಪತ್ನಿ ಅನುಮಾನಾಸ್ಪದವಾಗಿ ಸತ್ತ ಐದೇ ದಿನಕ್ಕೆ ತಾನೂ ಆತ್ಮಹತ್ಯೆಗೆ ಶರಣಾದ ಟೆಕ್ಕಿ

ಪತ್ನಿ ಅನುಮಾನಾಸ್ಪದವಾಗಿ ಸತ್ತ ಐದೇ ದಿನಕ್ಕೆ ತಾನೂ ಆತ್ಮಹತ್ಯೆಗೆ ಶರಣಾದ ಟೆಕ್ಕಿ

- Advertisement -
- Advertisement -

ಮೈಸೂರು: ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಐದೇ ದಿನಗಳಲ್ಲಿ  ಗಂಡನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ನಗರದ ಶ್ರೀರಾಂಪುರ ಎಸ್‌ಬಿಎಂ ಕಾಲನಿ ನಿವಾಸಿಗಳಾದ ಆಶಾರಾಣಿ (28) ಮತ್ತು ಪ್ರದೀಪ್ ಕುಮಾರ್ (33) ಮೃತ ದುರ್ದೈವಿಗಳು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದ ಪ್ರದೀಪ್ ಕುಮಾರ್ ಜತೆ ನಂಜನಗೂಡು ತಾಲೂಕಿನ ಸರಗೂರು ಗ್ರಾಮದ ಆಶಾರಾಣಿಗೆ ಕಳೆದ ತಿಂಗಳು ಮದುವೆ ಆಗಿತ್ತು. ಈ ದಂಪತಿ ಮೈಸೂರಿನಲ್ಲಿ ವಾಸವಿದ್ದರು. ಮೇ 8ರಂದು ನೇಣುಬಿಗಿದ ಸ್ಥಿತಿಯಲ್ಲಿ ಆಶಾರಾಣಿ ಮೃತದೇಹ ಮನೆಯಲ್ಲಿ ಪತ್ತೆಯಾಗಿತ್ತು. 

ಆಶಾರಾಣಿ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿ ಅಳಿಯ ಪ್ರದೀಪ್ ಕುಮಾರ್ ಹಾಗೂ ಈತನ ತಾಯಿ ಸರೋಜ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಬ್ಬರನ್ನೂ ಪೊಲೀಸರು ಮೇ 10ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.

ಇದರಿಂದ ಮನನೊಂದ ವಿಚಾರಣಾಧೀನ ಖೈದಿ ಪ್ರದೀಪ್ ಕುಮಾರ್ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಬೆಡ್​ಶೀಟ್​ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

- Advertisement -

Latest News

error: Content is protected !!