Sunday, June 7, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ : ಮತ್ತೊಬ್ಬ ಖ್ಯಾತ ನಟನನ್ನು ಬಲಿಪಡೆದ ಕೊರೊನಾ

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ : ಮತ್ತೊಬ್ಬ ಖ್ಯಾತ ನಟನನ್ನು ಬಲಿಪಡೆದ ಕೊರೊನಾ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್​ವುಡ್​ನ ಹಿರಿಯ ನಟ ಶಂಖನಾದ ಅರವಿಂದ್(70) ಕೊರೊನಾ ಸೋಂಕಿನಿಂದ ಇಂದು ವಿಧಿವಶರಾಗಿದ್ದಾರೆ.

ಕಾಶಿನಾಥ್‌ ಸಿನಿಮಾಗಳ‌ ಮೂಲಕ ಪ್ರೇಕ್ಷಕರಿಗೆ‌ ಚಿರಪರಿಚಿತರಾಗಿದ್ದ ಅರವಿಂದ್ ಅವರಿಗೆ ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕ್ಸಿತ್ಸೆ ಪಡೆಯುತ್ತಿದ್ದ ಅವರು ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.

ತಮ್ಮ ಹಾಸ್ಯ ನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದ ಶಂಖನಾದ ಅರವಿಂದ್, ಅಂನಂತ್ ನಾಗ್​, ಜಗ್ಗೇಶ್, ಪುನೀತ್​ ರಾಜ್​ಕುಮಾರ್​ ಸೇರಿದಂತೆ ಅನೇಕ ನಟ ದಿಗ್ಗಜರ ಜೊತೆ ನಟಿಸಿದ್ದರು. ಬೆಟ್ಟದ ಹೂ, ಶಂಕನಾದ, ಉಂಡುಹೋದ ಕೊಂಡುಹೋದ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ಪೋಷಕ ಹಾಗೂ ಹಾಸ್ಯ ನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.

- Advertisement -

Latest News

error: Content is protected !!