Thursday, June 4, 2026
Homeತಾಜಾ ಸುದ್ದಿಮಂಗಳೂರಿನಲ್ಲಿ ವೈದ್ಯೆ ಕೊರೊನಾಗೆ ಬಲಿ

ಮಂಗಳೂರಿನಲ್ಲಿ ವೈದ್ಯೆ ಕೊರೊನಾಗೆ ಬಲಿ

- Advertisement -
- Advertisement -

ಮಂಗಳೂರು ಕೊರೊನಾ ಅನ್ನೋ ರಕ್ಕಸನ ಆರ್ಭಟ ಮಿತಿ ಮೀರುತ್ತಿದ್ದು, ದಿನೇ ದಿನೇ ಕೋವಿಡ್ ಎಂಬ ಹೆಮ್ಮಾರಿ ರಾಜ್ಯದಲ್ಲಿ ನೂರಾರು ಸಂಖ್ಯೆ ಜನರನ್ನು ತನಗೆ ಬಲಿಯಾಗಿಸಿಕೊಳ್ಳುತ್ತಿದೆ.

ಇದೀಗ ಮಂಗಳೂರಿನಲ್ಲಿ ರೋಗಿಗಳ ಪ್ರಾಣ ಕಾಪಾಡುವ ವೈದ್ಯಯೊಬ್ಬರನ್ನು ಪ್ರಾಣವನ್ನೇ ಬಲಿ ಪಡೆದಿದೆ ಈ ಕೋವಿಡ್ ಅನ್ನೋ ನರ ರಕ್ಕಸ. ಹೌದು.. ಮಂಗಳೂರಿನ ಇಂಡಿಯಾನ ಆಸ್ಪತ್ರೆಯ ಆಡಳಿತಾಧಿಕಾರಿ ಬಶೀರ್ ಅವರ ಸಂಬಂದಿ ,ಅದೇ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವ 27ವರ್ಷದ ಯುವ ವೈದ್ಯೆ ಕೋವಿಡ್ ಪಾಸಿಟಿವ್‌ನಲ್ಲಿ ನಿನ್ನೆ ಬೆಳಗ್ಗೆ 10.30ರ ಸಮಯದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. 8 ತಿಂಗಳ ಹಿಂದೆ ಮದುವೆಯಾಗಿ ಗಂಡ– ಹೆಂಡತಿ ಅದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ನೂರಾರು ರೋಗಿಗಳ ಜೀವ ಕಾಪಾಡುತ್ತಿದ್ದ ವೈದ್ಯೆಯನ್ನೇ ನಿನ್ನೆ ಮಹಾಮಾರಿ ಬಲಿ ಪಡೆದುಕೊಂಡಿದೆ. ಇನ್ನು ಅವರ ಮೃತದೇಹವನ್ನು ಅವರ ಸ್ವಂತ ಊರಾದ ಕೇರಳದ ತಲಶೇರಿಗೆ ಕೊಂಡುಹೋಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ.

ರಾಜ್ಯದಲ್ಲಿ ದಿನೇ ದಿನೇ ಕೊರೊನಾಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು ವೈದ್ಯಯೇ ಕೋವಿಡ್ ನಿಂದ ಸಾವನ್ನಪ್ಪಿರೋದು ಜನರಲ್ಲಿ ಆತಂಕ ಮೂಡಿಸಿದೆ. ಹಾಗಂಥ ಕೊರೊನಾ ಬಗ್ಗೆ ಭಯಬೇಡ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಎಚ್ಚರದಿಂದ ಧೈರ್ಯವಾಗಿದ್ದರೆ ಎಲ್ಲವನ್ನೂ ಗೆಲ್ಲಬಹುದು.

- Advertisement -

Latest News

error: Content is protected !!