Saturday, August 29, 2026
Homeತಾಜಾ ಸುದ್ದಿನಟಿ ಸಂಜನಾ ಗಲ್ರಾನಿಗೆ ಕೋವಿಡ್ ಪಾಸಿಟಿವ್: ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದ ನಟಿ

ನಟಿ ಸಂಜನಾ ಗಲ್ರಾನಿಗೆ ಕೋವಿಡ್ ಪಾಸಿಟಿವ್: ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದ ನಟಿ

- Advertisement -
- Advertisement -

ಬೆಂಗಳೂರು : ಸ್ಯಾಂಡಲ್‍ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಈ ಕುರಿತು ನಟಿ ಕೊರೊನಾ ಟೆಸ್ಟ್ ಮಾಡಿಸಿರುವ ವೀಡಿಯೋವನ್ನು ಇನ್ ಸ್ಟಾದಲ್ಲಿ ಅಪ್ಲೋಡ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಅಲ್ಲದೆ ಯಾವ ರೀತಿ ಮುಂಜಾಗ್ರತೆ ವಹಿಸಬೇಕು ಎಂಬುದನ್ನು ಕೂಡ ತಿಳಿಸಿದ್ದಾರೆ.

ನನಗೆ ಕೊರೊನಾ ಪಾಸಿಟಿವ್ ಬಂದಿದೆ. ನನ್ನ ಕುಟುಂಬದಲ್ಲಿಯೇ ವೈದ್ಯರು ಇದ್ದಾರೆ. ಅವರು ಕೊರೊನಾ ವಾರಿಯರ್ ಆಗಿದ್ದು, ಅವರು ಸಮಾಜಕ್ಕೆ ತಮ್ಮ ಸೇವೆ ನೀಡಲೇಬೇಕು. ನೀವು ಮನೆ ಬಿಟ್ಟು ಹೋಗಬೇಡಿ, ಸಮಾಜಸೇವೆ ಮಾಡಬೇಡಿ. ನಿಮ್ಮ ಸುರಕ್ಷತೆ ನೋಡಿಕೊಳ್ಳಿ ಅಂತ ನಾನು ಅವರಿಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಸದ್ಯ ಸ್ವಲ್ಪ ಕೆಮ್ಮು ಇದೆ ಎಂದು ನಟಿ ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!