Friday, June 5, 2026
Homeಕರಾವಳಿನಾಗರ ಹಾವು ಹಿಡಿಯುವಾಗ ಹಾವು ಕಡಿತ: ನೆಕ್ಕಿಲಾಡಿಯಲ್ಲಿ ಉರಗ ಪ್ರೇಮಿ‌ ಸಾವು

ನಾಗರ ಹಾವು ಹಿಡಿಯುವಾಗ ಹಾವು ಕಡಿತ: ನೆಕ್ಕಿಲಾಡಿಯಲ್ಲಿ ಉರಗ ಪ್ರೇಮಿ‌ ಸಾವು

- Advertisement -
- Advertisement -

ಉಪ್ಪಿನಂಗಡಿ: ವಿಷಕಾರಿ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟು ರಕ್ಷಿಸುತ್ತಿದ್ದ ಉರಗ ಪ್ರೇಮಿಯೊಬ್ಬರು ನಾಗರಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನೆಕ್ಕಿಲಾಡಿಯಲ್ಲಿ ನಡೆದಿದೆ.

34 ನೆಕ್ಕಿಲಾಡಿ ನಿವಾಸಿ ಎಂ.ಆರ್ ಮಹಮ್ಮದ್ ಮುಸ್ತಫಾ ಮೃತ ದುರ್ದೈವಿ. ‘ಸ್ನೇಕ್ ಮುಸ್ತಾ’ ಎಂದೇ ಚಿರಪರಿಚಿತರಾಗಿದ್ದ ಎಂ.ಆರ್. ಮುಹಮ್ಮದ್ ಮುಸ್ತಾಫ ನಿನ್ನೆ ಬೆಳ್ತಂಗಡಿ ತಾಲೂಕಿನ ನೇಜಿಕಾರಿನಲ್ಲಿ ಮನೆಯೊಂದಕ್ಕೆ ನಾಗರಹಾವು ಬಂದ ಹಿನ್ನೆಲೆ‌ ಅದನ್ನು ಹಿಡಿಯೋದಕ್ಕೆ ಅಲ್ಲಿಗೆ ತೆರಳಿದ್ದರು. ಹಾವು ಹಿಡಿಯುತ್ತಿದ್ದ ಸಂದರ್ಭ ಇವರಿಗೆ ಹಾವು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡ ಇವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯೆ ಇವರು ಮೃತಪಟ್ಟಿದ್ದಾರೆ.

34 ನೆಕ್ಕಿಲಾಡಿ ಬೊಳಂತಿಲ ಹೊಸ ಕಾಲನಿ ನಿವಾಸಿ ಎಂ.ಆರ್. ಮುಸ್ತಾಫ ವೃತ್ತಿಯಲ್ಲಿ ಅಟೋ ರಿಕ್ಷಾ ಚಾಲಕರಾಗಿದ್ದ ಇವರು ವಿಷಕಾರಿ ಹಾವುಗಳನ್ನು ಹಿಡಿದು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು.

- Advertisement -

Latest News

error: Content is protected !!