- Advertisement -
- Advertisement -
ಮೈಸೂರು: ಮುಂದೂಡಲ್ಪಟ್ಟಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ -ಸೆಟ್) ಏಪ್ರಿಲ್ 25 ರಂದು ನಡೆಯಲಿದೆ.
ಮೈಸೂರು ವಿಶ್ವವಿದ್ಯಾಲಯ ಏಪ್ರಿಲ್ 11 ರಂದು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಕಾರಣಾಂತರದಿಂದ ಪರೀಕ್ಷೆ ಮುಂದೂಡಲಾಗಿತ್ತು. ಏಪ್ರಿಲ್ 25 ರಂದು ಕೆ -ಸೆಟ್ ಪರೀಕ್ಷೆ ನಡೆಯಲಿದೆ. ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರ ಪಾಲಿಕೆ ಆಯುಕ್ತರು, ಸಾರಿಗೆ ಅಧಿಕಾರಿಗಳು ಪರೀಕ್ಷೆ ಸೂತ್ರವಾಗಿ ನಡೆಸಲು ಸಹಕಾರ ನೀಡಬೇಕೆಂದು ಕೆ -ಸೆಟ್ ಸಂಯೋಜನಾಧಿಕಾರಿ ಪ್ರೊ. ರಾಜಶೇಖರ್ ಮನವಿ ಮಾಡಿದ್ದಾರೆ.
ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ವಿಜಯಪುರ, ದಾವಣಗೆರೆ, ಧಾರವಾಡ, ಕಲಬುರ್ಗಿ, ಮಂಗಳೂರು, ಶಿವಮೊಗ್ಗ ಮತ್ತು ತುಮಕೂರಿನಲ್ಲಿರುವ ನೋಡಲ್ ಕೇಂದ್ರಗಳಲ್ಲಿ 41 ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ.
ಮಾಹಿತಿಗೆ https://kset.uni-mysore.ac.in
- Advertisement -