Thursday, June 4, 2026
Homeತಾಜಾ ಸುದ್ದಿತಾಯಿ ಟಿವಿ ಸ್ವಿಚ್ ಆಫ್ ಮಾಡಿದ್ದಕ್ಕೆ ಬಾಲಕ ನೇಣಿಗೆ ಶರಣು

ತಾಯಿ ಟಿವಿ ಸ್ವಿಚ್ ಆಫ್ ಮಾಡಿದ್ದಕ್ಕೆ ಬಾಲಕ ನೇಣಿಗೆ ಶರಣು

- Advertisement -
- Advertisement -

ಮಹಾರಾಷ್ಟ್ರ: ಮಗ ನಿರಂತರವಾಗಿ ಟಿವಿ ನೋಡುತ್ತಿದ್ದಾನೆಂದು ತಾಯಿ ಟಿವಿ ಸ್ವಿಚ್ ಆಫ್ ಮಾಡಿದ್ದಕ್ಕೆ  ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಬೀದೆ ಜಿಲ್ಲೆಯ ಕೆಜ್ ತಾಲೂಕಿನ ಮನೆಯಲ್ಲಿ ನಡೆದಿದೆ.

ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಆನ್ ಲೈನ್ ತರಗತಿಗಳು ಮುಗಿದ ನಂತರ ಟಿವಿ ವೀಕ್ಷಿಸುತ್ತಿದ್ದ. ಸರಿಯಾಗಿ ಕುಳಿತು ಟಿವಿ ನೋಡುವಂತೆ ಅವನ ತಾಯಿ ಅವನಿಗೆ ಹೇಳಿದ್ದಾರೆ. ಬಳಿಕ  ಟಿವಿ ಆಫ್ ಮಾಡೋದಕ್ಕೆ ಮುಂದಾಗಿದ್ದಾರೆ, ಇದಾದ ನಂತರ ಬಾತ್ ರೂಮಿಗೆ ಹೋಗಿ ಹೋದ  ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಂತರ ಆತನ ತಾಯಿ ಮತ್ತು ಸಹೋದರಿ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಕೆಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!